ಶುಕ್ರವಾರ, ಜನವರಿ 28, 2022
24 °C
ಮಕ್ಕಳ ದಿನಾಚರಣೆ

ಚಿಂಚೋಳಿ: ಮಕ್ಕಳನ್ನು ಎತ್ತಿಕೊಂಡು ಸಂಭ್ರಮಿಸಿದ ನ್ಯಾಯಾಧೀಶರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ತುಮಕುಂಟಾ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಸಡಗರದಿಂದ ಆಚರಿಸಲಾಯಿತು. ನ 8ರಿಂದ ಪುನರರಾರಂಭವಾದ ಅಂಗನವಾಡಿ ಕೇಂದ್ರದಲ್ಲಿ‌ಮಕ್ಕಳ ದಿನಾಚರಣೆ ಅಂಗವಾಗಿ ಇಲ್ಲಿನ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿಜಯಕುಮಾರ ಎಸ್ ಜಟ್ಲಾ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶ ರವಿಕುಮಾರ ವಿ ಅವರು ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಮಕ್ಕಳ ದಿನಾಚರಣೆಯ ಶುಭಕೋರಿದರು.

ಮಕ್ಕಳೊಂದಿಗೆ ಒಂದಿಷ್ಟು ಸಮಯ ಕಳೆದ ನ್ಯಾಯಾಧೀಶರು ಒನಕೆ ಓಬವ್ವ ಹಾಗೂ ಜವಾಹರಲಾಲ್ ನೆಹರು ವೇಷಧಾರಿ ಮಕ್ಕಳನ್ನು ಎತ್ತಿಕೊಂಡು ಸಂಭ್ರಮಿಸಿದರು.

ನ್ಯಾಯಾಧೀಶರೊಂದಿಗೆ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಅನಿಲಕುಮಾರ ರಾಠೋಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗುರುಪ್ರಸಾದ ಕವಿತಾಳ, ಸರ್ಕಲ್ ಇನ್ ಸ್ಪೆಕ್ಟರ್ ಮಹಾಂತೇಶ ಪಾಟೀಲ, ಜಗದೀಶ, ಸಿದ್ದಾರೂಢ ಹೊಕ್ಕುಂಡಿ, ಪ್ರಭುಲಿಂಗ ವಾಲಿ, ವಕೀಲರ ಸಂಘದ ಅಧ್ಯಕ್ಷ ಸುದರ್ಶನ ಬಿರಾದಾರ, ನರಸಮ್ಮ‌ ಲಕ್ಷ್ಮಣ ಆವುಂಟಿ, ಶಾಮರಾವ ಹೊಸಮನಿ, ಜಗನ್ನಾಥ ಗಂಜಗಿರಿ, ಶರಣರೆಡ್ಡಿ‌ ಪೊಂಗಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು