ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: 10 ಕಡೆ ಕೈಕೊಟ್ಟ ಇವಿಎಂ

Published 7 ಮೇ 2024, 16:13 IST
Last Updated 7 ಮೇ 2024, 16:13 IST
ಅಕ್ಷರ ಗಾತ್ರ

ಚಿಂಚೋಳಿ: ಸ್ಥಳೀಯ ವಿಧಾನಸಭಾ ಮತಕ್ಷೇತ್ರದಲ್ಲಿ ಮಂಗಳವಾರ ನಡೆದ ಬೀದರ್ ಲೋಕಸಭಾ ಮತಕ್ಷೇತ್ರದ 10 ಕಡೆ ಇವಿಎಂಗಳಲ್ಲಿ ಅಡಚಣೆ ಉಂಟಾದರೆ, ಮಾರ್ಕ್‌ಪೋಲ್ ಸಮಯದಲ್ಲಿ 4 ಕಡೆ ಅಡಚಣೆಯಿಂದ ಮತಯಂತ್ರ ಬದಲಾವಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಾರ್ಕ್‌ಪೋಲ್ ಸಮಯದಲ್ಲಿ ಪಟಪಳ್ಳಿ, ಹಲಚೇರಾ, ಸಾಸರಗಾಂವ್, ಪಸ್ತಪೂರ, ಮತಗಟ್ಟೆಗಳಲ್ಲಿನ ಸರಿಯಾಗಿ ಕಾರ್ಯನಿರ್ವಹಿಸದ ಮತಯಂತ್ರ ಬದಲಾವಣೆ ಮಾಡಲಾಗಿದೆ.

ತಾಲ್ಲೂಕಿನ ಸಜ್ಜನಕೊಳ್ಳ ತಾಂಡಾ, ಯಲಮಾಮಡಿ, ಚನ್ನೂರು, ಗಡಿಲಿಂಗದಳ್ಳಿ, ದೇಗಲಮಡಿ, ಚಿಮ್ಮಾಈದಲಾಯಿ, ಹೇರೂರು ಕೆ, ವಟವಟಿ, ಕೊರವಿ, ಗೌಡನಹಳ್ಳಿ ಗ್ರಾಮಗಳ ಮತಗಟ್ಟೆಯಲ್ಲಿ ಮತಯಂತ್ರಗಳಲ್ಲಿ ದೋಷ ಎದುರಾಗಿದ್ದರಿಂದ ಮತದಾನಕ್ಕೆ ಅಡಚಣೆಯಾಗಿತ್ತು.

ಚಿಮ್ಮಾಈದಲಾಯಿ ಮತಗಟ್ಟೆಯಲ್ಲಿ ಮತಯಂತ್ರ ಎರಡು ಬಾರಿ ಕೈಕೊಟ್ಟಿದ್ದರಿಂದ ಮತದಾನ ರಾತ್ರಿ 7.40ರವರೆಗೆ ನಡೆಯಿತು ಎಂದು ಸಹಾಯಕ ಚುನಾವಣಾಧಿಕಾರಿ ಸಂತೋಷಕುಮಾರ ಇನಾಂದಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT