ಕಲಬುರಗಿ: ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರ ವಿಪರೀತ ತಂಪಿನ ವಾತಾವರಣ ಮನೆ ಮಾಡಿತು. ಎರಡು ದಿನಗಳಿಂದ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದ ಉಷ್ಣಾಂಶ ಸೋಮವಾರ ಏಕಾಏಕಿ 28 ಡಿಗ್ರಿಗೆ ಕುಸಿಯಿತು. ಕನಿಷ್ಠ ತಾಪಮಾನದಲ್ಲೂ 22ರಿಂದ 18 ಡಿಗ್ರಿಗೆ ಇಳಿಯಿತು. ಇದರಿಂದ ಮಟಮಟ ಮಧ್ಯಾಹ್ನ ಕೂಡ ಜನ ಶೀತಗಾಳಿಯಿಂದ ನಡುಗಿದರು.

ಈ ರೀತಿಯ ಶೀತಗಾಳಿ ಬೀಸುವುದು ಪ್ರತಿವರ್ಷದ ಹವಾಗುಣದ ಲಕ್ಷಣ. ಇದನ್ನು ‘ಪಾಶ್ಚ್ಯಾತ್ಯ ಪರಿಣಾಮ (ವೆಸ್ಟರ್ನ್ ಎಫೆಕ್ಟ್)’ ಎಂದು ಗುರುತಿಸಲಾಗುತ್ತದೆ. ಜನವರಿ 26ರವರೆಗೂ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಜನವರಿ 12ರಿಂದ 20ರವರೆಗೂ ಇದರ ಪ್ರಭಾವ ಹೆಚ್ಚಾಗಿದ್ದರಿಂದ ಶೀತಗಾಳಿ ಬೀಸಿತು. ಇದರಿಂದ ಜಿಲ್ಲೆಯಲ್ಲಿ ಶೀತ, ಕೆಮ್ಮು, ಜ್ವರದ ಲಕ್ಷಣಗಳಿಂದ ಅಪಾರ ಜನ ಬಳಲಿದರು.ಮೂರು ದಿನಗಳಿಂದ ವಾತಾವರಣದಲ್ಲಿ ತುಸು ಸಮತೋಲನ ಕಂಡುಬಂದಿತ್ತು. ಆದರೆ, ಸೋಮವಾರ ಇದ್ದಕ್ಕಿದ್ದಂತೆ ಚಳಿ ಹೆಚ್ಚಾಗಿದ್ದರಿಂದ ಜನರು ಮತ್ತೆ ಸ್ವೆಟರ್, ಜರ್ಕಿನ್, ಮಫ‍್ಲರ್‌ಗಳಿಗೆ ಮೊರೆಹೋದರು.

ಕನಿಷ್ಠ ಉಷ್ಣಾಂಶದಲ್ಲಿ ಇನ್ನೂ ಇಳಿಕೆ ಕಾಣಲಿದ್ದು, ಜ. 25ರಂದು 17 ಡಿಗ್ರಿ, 26ರಂದು 18 ಡಿಗ್ರಿ ಹಾಗೂ 27ರಂದು 17 ಡಿಗ್ರಿಯಷ್ಟು ದಾಖಲಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.