ಕಾಳಗಿ: ಇಲ್ಲಿನ ದೇವರಾಜ ಮಾಲಿಪಾಟೀಲ ಉಡಗಿ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ರಾತ್ರಿ ಕಿಡಿಗೇಡಿಗಳು ದಾಂಧಲೆ ನಡೆಸಿ ಉಪಕರಣಗಳನ್ನು ಒಡೆದು ಹಾಕಿರುವ ಘಟನೆ ಬುಧವಾರ ಕಂಡುಬಂದಿದೆ.

ಎಂದಿನಂತೆ ಸಿಬ್ಬಂದಿ ಬೆಳಿಗ್ಗೆ ಕಾಲೇಜಿಗೆ ಬಂದಾಗ ‘ಯಾರೋ ಕಿಡಿಗೇಡಿಗಳು ಕಾಲೇಜಿನ ಕಚೇರಿ ಬಾಗಿಲು ಮುರಿದು, ಕಂಪ್ಯೂಟರ್, ಟೇಬಲ್ ಮೇಲಿನ ಗಾಜು ಒಡೆದು, ಪ್ರಿಂಟರ್ ಮತ್ತು ವಿದ್ಯುತ್ ಸ್ವಿಚ್ ಗಳನ್ನು ಹಾಳುಮಾಡಿದ್ದು ಕಂಡುಬಂದಿದೆ. ಶೌಚಾಲಯದ ಕೊಠಡಿ ಸಹ ಹಾಳು ಮಾಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಪಿಎಸ್ಐ ತಿಮ್ಮಯ್ಯ ಬಿ.ಕೆ, ಕಾನ್ಸ್ಟೇಬಲ್ ಮೌನೇಶ, ಸಂಗಮೇಶ, ಮಂಜುನಾಥ ಮತ್ತು ಬೆರಳಚ್ಚು ವಿಭಾಗದ ಹೆಡ್ ಕಾನ್ಸ್ಟೇಬಲ್ ಸಂತೋಷ, ಶ್ವಾನದಳದ ವಿನೋದ, ಸೈದಪ್ಪ ಭೇಟಿ ನೀಡಿ ಪರಿಶೀಲಿಸಿದರು.

ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.