ಮಧುಕರ್ ಶೆಟ್ಟಿ ಸ್ಮಾರಕ ನಿರ್ಮಾಣ; ಸಂತೋಷ ಹೆಗಡೆ ಆಗ್ರಹ

7

ಮಧುಕರ್ ಶೆಟ್ಟಿ ಸ್ಮಾರಕ ನಿರ್ಮಾಣ; ಸಂತೋಷ ಹೆಗಡೆ ಆಗ್ರಹ

Published:
Updated:
Prajavani

ಕಲಬುರ್ಗಿ: ‘ಈಚೆಗೆ ನಿಧನರಾದ ಪೊಲೀಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಸ್ಮಾರಕವನ್ನು ಸರ್ಕಾರ ನಿರ್ಮಾಣ ಮಾಡಬೇಕು’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಆಗ್ರಹಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ಕಾರ ಸಿನಿಮಾದವರಿಗೆ ಸ್ಮಾರಕ ನಿರ್ಮಿಸುತ್ತದೆ. ಸಮಾಜಕ್ಕೆ ಅವರು ಏನು ಮಾಡಿದ್ದಾರೆ. ನಟನೆ ಮಾಡಿದ್ದಾರೆ, ಹಣ ಮಾಡಿದ್ದಾರೆ. ಅವರಿಗೆ ನೀಡಿದಷ್ಟು ಪ್ರಾಧಾನ್ಯತೆ ದಕ್ಷ ಅಧಿಕಾರಿಗಳಿಗೆ ಇಲ್ಲದಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮಧುಕರ್ ಶೆಟ್ಟಿ ಅವರ ಕಾರ್ಯದಕ್ಷತೆ, ಪ್ರಾಮಾಣಿಕತೆ ಏನು ಎಂಬುದು ಮುಂದಿನ ಪೀಳಿಗೆಗೆ ಗೊತ್ತಾಗಬೇಕು. ಆದ್ದರಿಂದ ಸ್ಮಾರಕ ನಿರ್ಮಾಣ ಮಾಡಬೇಕು. ಇದಕ್ಕೆ ನಾನೂ ಕೂಡ ಆರ್ಥಿಕ ಸಹಾಯ ಮಾಡುತ್ತೇನೆ. ಶೆಟ್ಟಿ ಅವರಿಗೆ ತಮ್ಮ ವೃತ್ತಿ ಜೀವನದಲ್ಲಿ ಸಿಗಬೇಕಾದ ಮಾನ್ಯತೆ ಸಿಗಲಿಲ್ಲ. ಪ್ರಾಮಾಣಿಕ ಅಧಿಕಾರಿಗಳಿಗೆ ಆಡಳಿತ ಯಾವಾಗಲೂ ವಿರೋಧಿಯಾಗಿರುತ್ತದೆ. ಹಿಂದಿನ ಸರ್ಕಾರ, ಈಗಿನ ಸರ್ಕಾರ ಅಂತ ಅಲ್ಲ, ಎಲ್ಲರೂ ಒಂದೇ’ ಎಂದರು.

‘ಮಧುಕರ್ ಶೆಟ್ಟಿ ಸಾವಿನ ಬಗ್ಗೆ ನನಗೆ ಯಾವುದೇ ರೀತಿಯ ಸಂಶಯ ಇಲ್ಲ. ಅವರ ಕುಟುಂಬದವರು ಕೂಡ ಅನುಮಾನ ವ್ಯಕ್ತಪಡಿಸಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !