ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್ ಡಿಕ್ಕಿ ಹೊಡೆಸಿ ಸಾವು: ಅಪರಾಧಿಗೆ ದಂಡ

Published 28 ಏಪ್ರಿಲ್ 2024, 4:37 IST
Last Updated 28 ಏಪ್ರಿಲ್ 2024, 4:37 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಅಫಜಲಪುರ ರಸ್ತೆಯ ಹಡಗಿಲ ಹಾರುತಿ ಮೇಳಕುಂದಾ ಗ್ರಾಮಗಳ ಮಧ್ಯದ ರಸ್ತೆಯಲ್ಲಿ ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿ ಎದುರಿನಿಂದ ಬರುತ್ತಿದ್ದ ಸ್ಕೂಟರ್ ಸವಾರನಿಗೆ ಡಿಕ್ಕಿ ಹೊಡೆದು ಅವರ ಸಾವಿಗೆ ಕಾರಣನಾದ ಅಪರಾಧ ಸಾಬೀತಾಗಿದ್ದರಿಂದ ಮಹೇಶ ಎಂಬಾತನಿಗೆ ಇಲ್ಲಿನ 4ನೇ ಸಿಜೆಎಂ ನ್ಯಾಯಾಲಯವು ದಂಡ ವಿಧಿಸಿ ಆದೇಶ ಹೊರಡಿಸಿದೆ.

2021ರ ಜನವರಿ 4ರಂದು ಮಹೇಶ ಎದುರಿಗೆ ಬರುತ್ತಿದ್ದ ಸೋಮಯ್ಯ ಅಲಿಯಾಸ್ ಸೋಮಣ್ಣ ಎಂಬುವವರಿಗೆ ಡಿಕ್ಕಿ ಹೊಡೆಸಿದ್ದರಿಂದ ಅವರು ಮೃತಪಟ್ಟರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಸಂಚಾರ ಪೊಲೀಸ್ ಠಾಣೆ–1ರ ಪಿಐ ರಮೇಶ ಕಾಂಬಳೆ ಹಾಗೂ ಶಾಂತಿನಾಥ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸುಶಾಂತ ಎಂ. ಚೌಗಲೆ ಅವರು ಅಪರಾಧಿಗೆ ಕಲಂ 304 (ಎ) ಅಡಿಯ ಅಪರಾಧಕ್ಕೆ ₹ 10 ಸಾವಿರ ದಂಡ, ಐಪಿಸಿ ಸೆಕ್ಷನ್ 279 ಅಡಿ ₹ 1 ಸಾವಿರ ದಂಡ ಹಾಗೂ ಮೋಟಾರು ವಾಹನಗಳ ಕಾಯ್ದೆಯಡಿಯ ಅಪರಾಧಕ್ಕೆ ₹ 2 ಸಾವಿರ ದಂಡ ವಿಧಿಸಿದರು. ದಂಡ ಪಾವತಿಸದೇ ಹೋದಲ್ಲಿ 10 ದಿನಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಶರಣಬಸಪ್ಪ ಹೋತಪೇಟ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT