ಮಂಗಳವಾರ, ಜೂನ್ 22, 2021
22 °C

ಕೊರೊನಾ: 21 ಮಂದಿ ಸಾವು, 832 ಪಾಸಿಟಿವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮತ್ತೆ 21 ಮಂದಿ ಮೃತಪಟ್ಟಿದ್ದಾರೆ ಎಂದು ಶನಿವಾರದ ಆರೋಗ್ಯ ಬುಲೆಟಿನ್‌ ತಿಳಿಸಿದೆ. ಇದರೊಂದಿಗೆ ಒಟ್ಟು ಸಾವಿಗೀಡಾದವರ ಸಂಖ್ಯೆ 633ಕ್ಕೆ ಏರಿಕೆಯಾಗಿದೆ.

ಮೃತಪಟ್ಟ ನಗರದವರು: ಸಂಜಯ ಗಾಂಧಿ ನಗರದ 55 ವರ್ಷದ ಪುರುಷ, ಅಕ್ಕಮಹಾದೇವಿ ಕಾಲೊನಿಯ 70 ವರ್ಷದ ವೃದ್ಧ, ವಿಠಲ ನಗರದ 50 ವರ್ಷದ ಮಹಿಳೆ, ಮಾಣಿಕೇಶ್ವರಿ ಕಾಲೊನಿಯ 60 ವರ್ಷದ ವೃದ್ಧ, 70 ವರ್ಷದ ಇನ್ನೊಬ್ಬ ವೃದ್ಧ, ವಿದ್ಯಾನಗರದ 68 ವರ್ಷದ ವೃದ್ಧ, ಎಂಎಸ್‌ಕೆ ಮಿಲ್‌ ಪ್ರದೇಶದ 64 ವರ್ಷದ ವೃದ್ಧ.

ಮೃತಪಟ್ಟ ಗ್ರಾಮೀಣರು: ಆಳಂದ ತಾಲ್ಲೂಕು ಧನ್ನೂರಿನ 60 ವರ್ಷದ ಪುರುಷ, ಚಿಂಚನಸೂರು ಗ್ರಾಮದ 30 ವರ್ಷದ ಯುವಕ, ಕಮಲಾಪುರ ತಾಲ್ಲೂಕು ಅಂಬಲಗಾದ 45 ವರ್ಷದ ಮಹಿಳೆ, ಕಲಬುರ್ಗಿ ತಾಲ್ಲೂಕು ಹೊನ್ನಕಿರಣಗಿಯ 32 ವರ್ಷದ ಯುವಕ, ಚೇಂಗಟಿಯ 51 ವರ್ಷದ ಪುರು, ಜೇವರ್ಜಿ ತಾಲ್ಲೂಕಿನ ಕೊಂಡಗಳ್ಳಿಯ 58 ವರ್ಷದ ಮಹಿಳೆ, ಕಲಬುರ್ಗಿ ತಾಲ್ಲೂಕು ಹಗರಗಾದ 56 ವರ್ಷದ ಪುರುಷ, ಶಹಾಬಾದ್‌ ನಗರದ 35 ವರ್ಷದ ಪುರುಷ, ಚಿಂಚೋಳಿ ತಾಲ್ಲೂಕು ಚಿತ್ರಸಾಲದ 42 ವರ್ಷದ ಪುರುಷ, ಕಲಬುರ್ಗಿ ತಾಲ್ಲೂಕು ಅಷ್ಟಗಾದ 61 ವರ್ಷದ ವೃದ್ಧ, ವಾಡಿಯ 55 ವರ್ಷದ ಮಹಿಳೆ, ಆಳಂದ ತಾಲ್ಲೂಕು ಮಾದನ ಹಿಪ್ಪರಗಾದ 62 ವರ್ಷದ ವೃದ್ಧ ಮೃತಪಟ್ಟವರು.

832 ಮಂದಿಗೆ ಪಾಸಿಟಿವ್‌: ಜಿಲ್ಲೆಯಲ್ಲಿ ಹೊಸದಾಗಿ 832 ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 55348ಕ್ಕೆ ಏರಿಕೆಯಾಗಿದೆ.

ಶನಿವಾರ 1646 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದೊಂದಿಗೆ ಗುಣಮುಖರಾದವರ ಸಂಖ್ಯೆ 39714ಕ್ಕೆ ಏರಿಕೆಯಾಗಿದೆ. ಇನ್ನೂ 15001 ಸಕ್ರಿಯ ಪ್ರಕರಣಗಳಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.