ಸೋಮವಾರ, ಜನವರಿ 17, 2022
20 °C
ಕೋವಿಡ್‌ ನಿಯಂತ್ರಣಕ್ಕೆ ಅಭಿಯಾನ

ಕಲಬುರಗಿ: 11 ಸಾವಿರ ವಿದ್ಯಾರ್ಥಿಗಳಿಗೆ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ಕೊರೊನಾ ಸೋಂಕು ಹರಡುವಿಕೆ ತಡೆಯಲು ಹಾಗೂ ರೋಗ ನಿರೋಧ ಶಕ್ತಿ ವೃದ್ಧಿಸಲು ಜನವರಿ 3 ರಿಂದ 7ರವರೆಗಿನ ಅವಧಿಯಲ್ಲಿ ತಾಲ್ಲೂಕಿನ (ಚಿತ್ತಾಪುರ, ಶಹಾಬಾದ್, ಕಾಳಗಿ) ವಿವಿಧ ಶಾಲಾ ಕಾಲೇಜಿನ 15 ರಿಂದ 18 ವರ್ಷದವರೆಗಿನ ಒಟ್ಟು 11,576 ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಹಾಕಲಾಗಿದೆ.

ಮೊದಲನೇ ದಿನ 2,964, ಎರಡನೇ ದಿನ 3,710, ಮೂರನೇ ದಿನ 2,079, ನಾಲ್ಕನೇ ದಿನ 1,348 ಮತ್ತು ಐದನೇ ದಿನ 1,475 ಹೀಗೆ ಒಟ್ಟು 11,576 ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಹಾಕಲಾಯಿತು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಮರದೀಪ್ ಪವಾರ್ ತಿಳಿಸಿದ್ದಾರೆ.

ಚಿತ್ತಾಪುರ ತಾಲ್ಲೂಕಿನಲ್ಲಿ (ಚಿತ್ತಾಪುರ, ಶಹಾಬಾದ್, ಕಾಳಗಿ ಸೇರಿ) ಸರ್ಕಾರಿ ಪ್ರೌಢ ಶಾಲೆ, ಖಾಸಗಿ ಅನುದಾನಿತ ಪ್ರೌಢ ಶಾಲೆ ಮತ್ತು ಅನುದಾನ ರಹಿತ ಪ್ರೌಢ ಶಾಲೆಯಲ್ಲಿ 15 ರಿಂದ 18 ವರ್ಷದವರೆಗಿನ ಒಟ್ಟು 9,138 ವಿದ್ಯಾರ್ಥಿಗಳಿದ್ದಾರೆ. ಜ.7 ರವರೆಗೆ ಒಟ್ಟು 7,200 ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಹಾಕಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರು ತಿಳಿಸಿದ್ದಾರೆ.

ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಂದ ಅಲ್ಲದೇ ಪೋಷಕರಿಂಲೂ ಉತ್ತಮ ಸ್ಪಂದನೆ ಸಿಕ್ಕಿದೆ. ಕಾರ್ಯಕ್ರಮ ಯಶಸ್ವಿಯಾಗುತ್ತಿದೆ ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರು ತಿಳಿಸಿದ್ದಾರೆ.

ಪಿಯು ಕಾಲೇಜಿನಲ್ಲಿ ಲಸಿಕೆ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಈಚೆಗೆ ಲಸಿಕೆ ಹಾಕಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಭಾರತಿ ಖುಬಾ, ಉಪನ್ಯಾಸಕ ಎಸ್.ಎಸ್ ಕುಳಗೇರಿ ಮತ್ತು ಗ್ರಂಥಪಾಲಕ ರೇವಣಸಿದ್ದಪ್ಪ ಗಂಜಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.