ಬುಧವಾರ, ಆಗಸ್ಟ್ 4, 2021
24 °C
ಜಿಲ್ಲೆಯಲ್ಲಿ ಮತ್ತೆ 66 ಜನರಲ್ಲಿ ಸೋಂಕು; 22 ಜನ ಗುಣಮುಖ

ಕಲಬುರ್ಗಿ | ಕೋವಿಡ್‌: ಮತ್ತೊಬ್ಬ ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕೋವಿಡ್‌–19 ಸೋಂಕಿನಿಂದ ನಗರದ ರಿಂಗ್ ರೋಡ್ (ಮಹಾರಾಜ ಹೋಟೆಲ್) ಪ್ರದೇಶದ 56 ವರ್ಷದ ವ್ಯಕ್ತಿ ಜುಲೈ 5ರಂದು ಮೃತಪಟ್ಟಿದ್ದಾರೆ. ಇದರಿಂದ ಸೋಂಕಿಗೆ ಮೃತರಾದವರ ಸಂಖ್ಯೆ ‌30ಕ್ಕೆ ಏರಿಕೆಯಾಗಿದೆ. ಗುರುವಾರ ಮತ್ತೆ 66 ಜನರಲ್ಲಿ ಕೋವಿಡ್‌–19 ಇರುವುದು ದೃಢಪಟ್ಟಿದೆ.

ತೀವ್ರ ಉಸಿರಾಟ ತೊಂದರೆ, ಅಧಿಕ ರಕ್ತದೊತ್ತದ, ಮಧುಮೇಹ ಹಾಗೂ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಇವರಿಗೆ ಜು.5 ಕೊರೋನಾ ಸೋಂಕು ಪತ್ತೆಯಾಗಿದ್ದರಿಂದ ಕಲಬುರ್ಗಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿಸಿತ್ತು. ಅಂದೇ ನಿಧನ ಹೊಂದಿದ್ದಾರೆ. ಗುರುವಾರ 22 ಜನರು ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

ಕಲಬುರ್ಗಿಯ ಕೆಬಿಎನ್‌ ದರ್ಗಾದಲ್ಲಿದ್ದ 13 ಜನರಿಗೂ ಸೋಂಕು ದೃಢಪಟ್ಟಿದೆ. ಆದರ್ಶ ನಗರ, ಬಿದ್ದಾಪುರ ಕಾಲೊನಿ, ಸಿದ್ದೇಶ್ವರ ಕಾಲೊನಿಯ ಗಾಜಿಪುರ, ಎಂ.ಬಿ. ನಗರ, ಪ್ರಗತಿ ಕಾಲೊನಿ, ಅಫಜಲಪುರ ತಾಲ್ಲೂಕಿನ ಹಸರಗುಂಡಗಿ, ಕಲಬುರ್ಗಿಯ ಅಬೂಬಕರ್‌ ಕಾಲೊನಿ, ನ್ಯೂ ರೆಹಮತ್ ನಗರ, ಸುಲ್ತಾನಪುರದಲ್ಲಿರುವ ಕೆಎಸ್‌ಆರ್‌ಪಿ ಪೊಲೀಸ್‌ ಕ್ವಾರ್ಟರ್ಸ್‌ನ ವ್ಯಕ್ತಿ, ಸ್ಟೇಶನ್‌ ಬಜಾರ್‌ನ ಮೂವರು, ಮೆಹ್ತಾ ಕಾಂಪ್ಲೆಕ್ಸ್‌, ಕರುಣೇಶ್ವರ ನಗರ ಐಸಿಡಿಎಸ್‌, ಬೀದರ್‌ ಜಿಲ್ಲೆಯ ಚಿಟಗುಪ್ಪಾ, ಕೋಟನೂರ ಮಠ, ಮೋಮಿನಪುರ, ಎಂ.ಜಿ. ನಗರ, ಜೇವರ್ಗಿ ತಾಲ್ಲೂಕಿನ ಗಣವಾರ, ಸೇಡಂ ತಾಲ್ಲೂಕಿನ ಕೋಡ್ಲಾ, ಮಾಲಗತ್ತಿ ಕ್ರಾಸ್‌, ವೆಂಕಟೇಶ ನಗರ, ಚಿತ್ತಾಪುರ ತಾಲ್ಲೂಕಿನ ಯಾಗಾಪುರ, ಆಜಾದಪುರ ರಸ್ತೆ, ಹುಮನಾಬಾದ್‌ ಬೇಸ್‌ನ ಐರವಾಡಿ, ಆನಂದ ನಗರ, ಸೇಡಂ ತಾಲ್ಲೂಕಿನ ಕುರಕುಂಟಾ, ಇಂಜೆರಪಲ್ಲಿ, ಕಲಬುರ್ಗಿಯ ಬಸವೇಶ್ವರ ಕಾಲೊನಿ, ಸ್ಟೇಷನ್‌ ರಸ್ತೆ, ಯಾನಾಗುಂದಿ, ಗಣೇಶ ನಗರ, ಬೋಜುನಾಯಕ ತಾಂಡಾ, ಆಳಂದ ಪೊಲೀಸ್‌ ಠಾಣೆ ಸಿಬ್ಬಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಕಲಬುರ್ಗಿಯ ಮಿಲ್ಲತ್ ನಗರ, ಕಾಳಗಿಯ ಲಕ್ಷ್ಮಣ ತಾಂಡಾ, ವಾಡಿಯ ಜಾಮಿಯಾ ಮಸೀದಿ ಬಳಿಯ ಮೂವರು, ಯಡ್ರಾಮಿಯ ಅಂಬರಖೇಡ ತಾಂಡಾ, ಹಂಗರಗಾ (ಕೆ), ಜೇವರ್ಗಿ ತಾಲ್ಲೂಕು ಅಂದೋಲಾದ ಬಸವೇಶ್ವರ ನಗರದ ಇಬ್ಬರು, ಬಳುಂಡಗಿಯಲ್ಲಿ ಯುವಕನಲ್ಲಿ ಸೋಂಕು ಕಾಣಿಸಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು