ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಮ್ಸ್‌ ಶೌಚಾಲಯದಲ್ಲೇ ಕುಸಿದು ಮೃತಪಟ್ಟ ಸೋಂಕಿತ

Last Updated 7 ಮೇ 2021, 5:01 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನ ಜಿಮ್ಸ್‌ನ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಗುರುವಾರ ಶೌಚಾಲಯದಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಸಾವು ಸಂಭವಿಸಿದ ಮೂರು ತಾಸಿನವರೆಗೂ ಯಾವುದೇ ಸಿಬ್ಬಂದಿ ಅವರತ್ತ ಗಮನ ಹರಿಸಿಲ್ಲ ಎಂದು ಮೃತನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.‌

ನಗರದ ಕಾಕಡೆಚೌಕ್‌ನ ನಿವಾಸಿ ಪಾಂಡುರಂಗ ಜಮಾದಾರ (40) ಶೌಚಾಲಯದಲ್ಲಿ ಬಿದ್ದು ಮೃತಪಟ್ಟಿವರು. ತೀವ್ರಸ್ವರೂಪದ ಸೋಂಕು ಕಾಣಿಸಿಕೊಂಡಿದ್ದರಿಂದ ಅವರು ಆಮ್ಲಜನಕಯುಕ್ತ ಬೆಡ್‌ ಮೇಲೆ ಚಿಕಿತ್ಸೆ ಪಡೆಯುತ್ತಿದ್ದರು.

‘ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದವರ ಮೇಲೆ ಸಿಬ್ಬಂದಿ ಸರಿಯಾದ ನಿಗಾ ಇಡುತ್ತಿಲ್ಲ. ತಮ್ಮ ಸಂಬಂಧಿ ಕುಸಿದು ಬಿದ್ದಾಗಲೇ ನೋಡಿದ್ದರೆ ಅವರ ಪ್ರಾಣ ಉಳಿಯುತ್ತಿತ್ತು’ ಎಂದು ಕೆಲವರು ಆಸ್ಪತ್ರೆಯ ಆವರಣದಲ್ಲಿಯೇ ತಕರಾರು ತೆಗೆದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಮ್ಸ್‌ ನಿರ್ದೇಶಕಿ ಡಾ.ಕವಿತಾ ಪಾಟೀಲ, ‘ಶೌಚಾಲಯದಲ್ಲಿ ಬಿದ್ದು ಮೃತಪಟ್ಟ ವ್ಯಕ್ತಿಗೆ ಸರಿಯಾದ ಚಿಕಿತ್ಸೆ ಕೊಡಲಾಗುತ್ತಿತ್ತು. ಅವರು ಶೌಚಾಲಯದಲ್ಲಿ ಬಿದ್ದು ಮೃತಪಟ್ಟ ಕೆಲ ಸಮಯದ ನಂತರ ಸಿಬ್ಬಂದಿ ನೋಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಅವರಿಗೆ ಚಿಕಿತ್ಸೆ ನೀಡಲು ವೈದ್ಯರು ಧಾವಿಸಿದರು. ಆದರೂ ಪ್ರಯೋಜನವಾಗಲಿಲ್ಲ. ಇದರಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯ ಏನೂ ಇಲ್ಲ. ಕೆಲವರಲ್ಲಿ ಆಮ್ಲಜನಕದ ಪ್ರಮಾಣ ಏಕಾಏಕಿ ಕುಸಿತ ಕಾಣುತ್ತದೆ. ಇದನ್ನು ‘ಟ್ಯಾಂಬ್ರೋ ಎಂಬಾಲಿಸಂ’ ಎಂದು ಹೇಳುತ್ತೇವೆ. ಶೌಚಾಲಯದಲ್ಲಿ ಮೃತಪಟ್ಟ ವ್ಯಕ್ತಿಯ ಸಾವಿಗೆ ಇದೇ ಕಾರಣ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT