ಸೋಮವಾರ, ಮಾರ್ಚ್ 20, 2023
24 °C

ಕಲಬುರಗಿ: ಇಪ್ಪತ್ತು ಕ್ಷೇತ್ರಗಳಲ್ಲಿ ಸಿಪಿಐ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ವತಿಯಿಂದ ರಾಜ್ಯದ 20 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ’ ಎಂದು ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಾತಿ ಸುಂದರೇಶ್ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯ ಆಳಂದ ಮತ್ತು ಜೇವರ್ಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಿಪಿಐ ಸ್ಪರ್ಧಿಸಲಿದೆ. ಆಳಂದ ಕ್ಷೇತ್ರಕ್ಕೆ ವೌಲಾಮುಲ್ಲಾ ಮತ್ತು ಜೇವರ್ಗಿ ಕ್ಷೇತ್ರಕ್ಕೆ ಡಾ.ಮಹೇಶಕುಮಾರ ರಾಠೋಡ ಅವರು ಚುನಾವಣೆಗೆ ಸ್ಪರ್ಧಿಸುವರು’ ಎಂದರು.

‘ರಾಜ್ಯದಲ್ಲಿ 50 ಲಕ್ಷ ಕುಟುಂಬಗಳು ವಸತಿ ರಹಿತವಾಗಿವೆ. ಇವುಗಳಿಗೆ ವಸತಿ ಉದ್ದೇಶಕ್ಕಾಗಿ ಭೂಮಿ ಕಾಯ್ದಿರಿಸದೇ ಸರ್ಕಾರಗಳು ಜನರನ್ನು ಬೀದಿಗೆ ತಳ್ಳಿವೆ. ಬಿಜೆಪಿ ಸರ್ಕಾರ 17 ಲಕ್ಷ ಎಕರೆ ಸರಕಾರಿ ಜಮೀನನ್ನು ಟ್ರಸ್ಟ್, ಮಠ ಮತ್ತು ಪ್ರಭಾವಿ ವ್ಯಕ್ತಿಗಳಿಗೆ ಪರಭಾರೆ ಮಾಡಲು ಹೊರಟಿದೆ. ಕೂಡಲೇ ಸರ್ಕಾರ ನಿವೇಶನಕ್ಕೆ ಅಗತ್ಯವಿರುವ ಐದು ಲಕ್ಷ ಎಕರೆ ಸರ್ಕಾರಿ ಭೂಮಿಯನ್ನು ರಾಜ್ಯದಾದ್ಯಂತ ಗುರುತಿಸಿ ನಿವೇಶನ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ವಸತಿ ರಹಿತರಿಗೆ ಭೂಮಿ ಮತ್ತು ಮನೆಗಳನ್ನು ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಲು ಸಲುವಾಗಿ ಸಿಪಿಐ ನೇತೃತ್ವದಲ್ಲಿ ಮಾರ್ಚ್ 9ರಂದು ವಿಧಾನಸೌಧ ಚಲೊ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹೋರಾಟಕ್ಕೆ ಜಿಲ್ಲೆಯಿಂದ ಸಾವಿರಾರು ವಸತಿ ರಹಿತರು ಬೆಂಗಳೂರಿಗೆ ತೆರಳಲಿದ್ದಾರೆ ಎಂದರು.

ಪಕ್ಷದ ಮುಖಂಡರಾದ ವೌಲಾಮುಲ್ಲಾ, ಡಾ.ಮಹೇಶಕುಮಾರ ರಾಠೋಡ, ಪದ್ಮಾವತಿ ಪಾಟೀಲ, ಪ್ರಭುದೇವ ಯಳಸಂಗಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು