ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ: ಶತಮಾನದ ಮರಗಳಿಗೆ ಕೊಡಲಿ ಏಟು

ವೆಂಕಟಾಪುರ: ಹಣದ ದುರಾಸೆಗೆ ಮರ ಕಡಿದು ಮಾರಾಟ
Published 3 ಆಗಸ್ಟ್ 2024, 15:50 IST
Last Updated 3 ಆಗಸ್ಟ್ 2024, 15:50 IST
ಅಕ್ಷರ ಗಾತ್ರ

ಚಿಂಚೋಳಿ: ಹಣದಾಸೆಗೆ ಶತಮಾನಕ್ಕಿಂತ ಹಳೆಯದಾಗಿದ್ದ ಮೂರು ಹುಣಸೆ ಮರಗಳನ್ನು ಗ್ರಾ.ಪಂ ಮಾಜಿ ಅಧ್ಯಕ್ಷರೊಬ್ಬರು ಕಡಿದು ಮಾರಾಟ ಮಾಡಿದ ಪ್ರಕರಣ ತಾಲ್ಲೂಕಿನ ವೆಂಕಟಾಪುರ ಗ್ರಾಮದಿಂದ ವರದಿಯಾಗಿದೆ. ಮರಗಳನ್ನು ಕತ್ತರಿಸಲು ಯಾವುದೇ ಅನುಮತಿ ಪಡೆದಿಲ್ಲ.

ಗ್ರಾಮಸ್ಥರಿಗೆ ಅಥವಾ ಗ್ರಾ.ಪಂ. ಸದಸ್ಯರಿಗೆ ಮಾಹಿತಿ ನೀಡದೇ ಮೂರು ಮರಗಳನ್ನು ಕತ್ತರಿಸಿ ಲಾರಿಯಲ್ಲಿ ತುಂಬಿ ಮಾರಾಟ ಮಾಡಿದ್ದು, ಸಾರ್ವಜನಿಕರು ಹುಬ್ಬೇರಿಸುವಂತಾಗಿದೆ.

‘ಗ್ರಾಮದ ಶಾಲೆಗೆ ಸಮೀಪವಿರುವ ಮರವೊಂದು ವ್ಯಕ್ತಿಯೊಬ್ಬರ ಮನೆಯ ಮೇಲೆ ಬಿದ್ದರೆ ಅಪಾಯ ಉಂಟಾಗುವ ಭೀತಿಯಿತ್ತು. ಇದರಿಂದ ಕತ್ತರಿಸಲಾಗಿದೆ ಎಂದು ಸಬೂಬು ಹೇಳಿದ್ದಾರೆ. ಆದರೆ ಉಳಿದ ಎರಡು ಮರಗಳಿಂದ ಯಾವುದೇ ಅಪಾಯವಿಲ್ಲದಿದ್ದರೂ ಕತ್ತರಿಸಿದ್ದಾರೆ’ ಎಂದು ಸ್ಥಳೀಯರು ದೂರಿದ್ದಾರೆ.

‘ಮರಗಳನ್ನು ಕಡಿದವರ ವಿರುದ್ಧ ಕ್ರಮ ಜರುಗಿಸಬೇಕು. ದುರ್ಗಮ್ಮ ಗುಡಿಯ ಬಳಿಯ ಕತ್ತರಿಸಿದ ಗಿಡದ ಹಣ ದುರ್ಗಮ್ಮ ದೇವಿ ದೇವಸ್ಥಾನಕ್ಕೆ ನೀಡಬೇಕು. ಉಳಿದ ಗಿಡಗಳ ಹಣ ಗ್ರಾ.ಪಂ.ಗೆ ಜಮಾ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ಗ್ರಾ.ಪಂ ಸದಸ್ಯೆ ಗೌರಮ್ಮ ಪೆಂಟಯ್ಯ ಭಜಂತ್ರಿ ಗ್ರಾ.ಪಂ. ಮಾಜಿ ಅಧ್ಯಕ್ಷ ರಾಜು ಪೆಂಟಣ್ಣ ಹಾಗೂ ಮುಖಂಡರಾದ ನಿಜಾಮ ಪಟೇಲ, ಶೀನು, ಜಗನ್ನಾಥಂ, ನಾಗಣ್ಣ, ಅಝಣ್ಣ, ರಾಮಚಂದ್ರರ, ಅಂಜಣ್ಣ ಚಂದ್ರಪ್ಪ, ಮಲ್ಲಪ್ಪ ಅಂಜಣ್ಣ, ನರಶಿಮ್ಲು ನಾಗಪ್ಪ, ಪಾಂಡು ನರಸನ್ನ, ಪಾಪಯ್ಯ ನರಸನ್ನ,ಸಾಯಿಕುಮಾರ, ಪ್ರಭಾರ, ಶೇಖರ, ಸಂಜು, ವೆಂಕಟ, ಪುಂಡಲಿಕಮ್ಮ ಸೇರಿ 26 ಮಂದಿ ಪತ್ರಿಕಾ ಹೇಳಿಕೆಗೆ ಸಹಿ ಹಾಕಿದ್ದಾರೆ.

ಚಿಂಚೋಳಿ ತಾಲ್ಲೂಕಿನ ವೆಂಕಟಾಪುರ ಗ್ರಾಮದಲ್ಲಿ ಶತಮಾನದಷ್ಟು ಹಳೆದಾದ ಹುಣಸೆ ಮರ ಕತ್ತರಿಸಿರುವುದು
ಚಿಂಚೋಳಿ ತಾಲ್ಲೂಕಿನ ವೆಂಕಟಾಪುರ ಗ್ರಾಮದಲ್ಲಿ ಶತಮಾನದಷ್ಟು ಹಳೆದಾದ ಹುಣಸೆ ಮರ ಕತ್ತರಿಸಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT