ಶನಿವಾರ, ಆಗಸ್ಟ್ 20, 2022
21 °C

ಕುರಿಕೋಟಾ; ಯುವಕನ ಶವ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲಾಪುರ: ತಾಲ್ಲೂಕಿನ ಕುರಿಕೋಟಾ ಸೇತುವೆ ಬಳಿ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನ ಶವ ಬುಧವಾರ ಪತ್ತೆಯಾಗಿದೆ.

ಕಲಬುರ್ಗಿ ನಗರದ ಕುವೆಂಪುನಗರದ ಮಂಜುನಾಥ ರಂಗರಾಜ ಕಾಂಬ್ಳೆ (24) ಮೃತ ಯುವಕ.

ಕಳೆದ ಡಿ.6ರಂದು ಕುರಿಕೋಟಾ ಸೇತುವೆ ಬಳಿ ತೆರಳಿ ತನ್ನ ಸಹೋದರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿ ನದಿಗೆ ಹಾರಿದ್ದಾನೆ. ಸಂಬಂಧಿಕರು ಈ ಬಗ್ಗೆ ಮಹಾಗಾಂವ್ ಪೊಲೀಸರಿಗೆ ತಿಳಿಸಿದ್ದಾರೆ. ಅಂದಿನಿಂದ 3 ದಿನಗಳ ಕಾಲ ಅಗ್ನಿಶಾಮಕ ದಳದೊಂದಿಗೆ ಪೊಲೀಸರು ಪತ್ತೆ ಕಾರ್ಯ ಆರಂಭಿಸಿದ್ದು, ಬುಧವಾರ ಶವ ಪತ್ತೆಯಾಗಿದೆ ಎಂದು ಪಿಎಸ್‍ಐ ಹಸೇನ್ ಬಾಷಾ ತಿಳಿಸಿದ್ದಾರೆ. ಮಹಗಾಂವ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.