ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡಯಾಲಿಸಿಸ್‌ ಕೇಂದ್ರಗಳ ನೀರಿನ ಸಿಂಟೆಕ್ಸ್‌ಗಳಿಗೆ ನೆರಳು

Published 8 ಏಪ್ರಿಲ್ 2024, 4:43 IST
Last Updated 8 ಏಪ್ರಿಲ್ 2024, 4:43 IST
ಅಕ್ಷರ ಗಾತ್ರ

ಕಲಬುರಗಿ: ಸರ್ಕಾರಿ ಆಸ್ಪತ್ರೆಗಳಲ್ಲಿನ ಡಯಾಲಿಸಿಸ್ ಯಂತ್ರಗಳಿಗೆ ನೀರು ಸರಬರಾಜು ಮಾಡುವ ಆಸ್ಪತ್ರೆಗಳ ಮೇಲಿನ ನೀರಿನ ಸಿಂಟೆಕ್ಸ್‌ಗಳಿಗೆ ನೆರಳಿನ ಆಶ್ರಯ ಮಾಡಿ, ಸೂರ್ಯನ ಶಾಖದಿಂದ ನೀರು ಬಿಸಿಯಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ.

‘ಡಯಾಲಿಸಿಸ್‌ಗೂ ತಟ್ಟಿದ ಬೇಸಿಗೆ ಬಿಸಿ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ಯ ಏಪ್ರಿಲ್ 7ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಇದನ್ನು ಗಮನಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಎಲ್ಲ ಕೇಂದ್ರಗಳ ನೀರಿನ ಸಿಂಟೆಕ್ಸ್‌ಗಳಿಗೆ ನೆರಳು ಮಾಡುವಂತೆ ಸೂಚಿಸಿದರು. ಅವರ ಸೂಚನೆಯಂತೆ ಸಿಂಟೆಕ್ಸ್‌ಗಳಿಗೆ ನೆರಳು ಮಾಡಲಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಎಚ್‌ಒ ಡಾ.ರತಿಕಾಂತ ಸ್ವಾಮಿ, ‘ಡಯಾಲಿಸಿಸ್‌ ಪ್ರಕ್ರಿಯೆಯಲ್ಲಿ ಬಿಸಿ ನೀರು ಬಾರದಂತೆ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT