ಗುರುವಾರ , ಆಗಸ್ಟ್ 11, 2022
23 °C

ಕಲಬುರ್ಗಿ: ಮಹಿಳಾ ವಸತಿ ನಿಲಯಕ್ಕೆ ₹ 10 ಲಕ್ಷ ದೇಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದಿಂದ ನಿರ್ಮಾಣವಾಗುತ್ತಿರುವ ಮಹಿಳಾ ವಸತಿ ನಿಲಯದ ಗ್ರಂಥಾಲಯ ಕೊಠಡಿಗೆ ₹ 10 ಲಕ್ಷ ಮೊತ್ತದ ಚೆಕ್ಕನ್ನು ಗಣೇಶ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಶಾಂತಕುಮಾರ ಬಿಲಗುಂದಿ ಅವರು ವಸತಿ ನಿಲಯದ ಕಟ್ಟಡ ಸಮಿತಿ ಅಧ್ಯಕ್ಷ ಶಾಸಕ ಶರಣಬಸಪ್ಪ ದರ್ಶನಾಪೂರ ಅವರಿಗೆ ಹಸ್ತಾಂತರಿಸಿದರು.

ಬ್ಯಾಂಕ್ ವತಿಯಿಂದ ಶರಣಬಸಪ್ಪ ದರ್ಶನಾಪುರ, ವಸತಿ ನಿಲಯ ಕಟ್ಟಡ ಸಮಿತಿ ಉಸ್ತುವಾರಿ ನೀಲಕಂಠ ಮೂಲಗೆ, ಮಹಾಸಭಾ ಅಧ್ಯಕ್ಷ ಶರಣಕುಮಾರ ಮೋದಿಯವರನ್ನು ಸನ್ಮಾನಿಸಿ ಶುಭ ಹಾರೈಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಸವರಾಜ ವಾಲಿ, ಮಾಜಿ ಅಧ್ಯಕ್ಷ ಸೋಮಶೇಖರ ಗೋನಾಯಕ ಹಾಗೂ ಕೋಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಮಣಿಲಾಲ್ ಶಹಾ, ಶಿವರಾಜ ಖೂಬಾ, ರವಿಕುಮಾರ್ ಐನಾಪುರ, ರಾಮು ಕೋಸಗಿ, ಸೋನಾಬಾಯಿ ಕೋಣಿನ್, ಬಿಂದು ಶಹಾ, ರವಿ ಸರಸಂಬಿ, ನಾಗೇಂದ್ರ ಕಲ್ಯಾಣಿ, ನಿತಿನ್ ತಾಂದಳೆ, ಯುವ ಘಟಕದ ಗೌರವಾಧ್ಯಕ್ಷ ಎಂ.ಎಸ್.ಪಾಟೀಲ  ನರಿಬೋಳ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು