ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾವು ಬದಲಾದರೆ ಮಾತ್ರ ಸಮಾಜ ಬದಲಾಗುತ್ತದೆ’

‘ಮಹಾನಾಯಕನೀತ ಮಹಾಮಾನವ ಡಾ.ಅಂಬೇಡ್ಕರ್’ ವಿಶೇಷ ಕಾರ್ಯಕ್ರಮ
Last Updated 22 ಸೆಪ್ಟೆಂಬರ್ 2020, 15:40 IST
ಅಕ್ಷರ ಗಾತ್ರ

ಕಲಬುರ್ಗಿ: ‘ವಿಶ್ವದ ರತ್ನಗಳಾದ ಬುದ್ಧ ಹಾಗೂ ಬಸವಣ್ಣನವರ ಸಾಮಾಜಿಕ ಸಮಾನತೆಯ ವಿಚಾರಗಳನ್ನು ಅರಿತುಕೊಂಡು ಅವರ ಹಾದಿಯಲ್ಲಿಯೇ ಸಾಗಿ, ಆಧುನಿಕ ಭಾರತದಲ್ಲಿ ಮಹಾನ್ ಮಾನವತಾವಾದಿಯಾಗಿ ಬೆಳೆದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಇಡೀ ಜಗತ್ತೇ ಗೌರವಿಸುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಠಗಿ ಹೇಳಿದರು.

ಮಹಾತ್ಮಾ ಬಸವೇಶ್ವರ ಕಾಲೊನಿಯ ಬುದ್ಧ, ಬಸವ, ಅಂಬೇಡ್ಕರ್ ಯುವಕರ ಬಳಗದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಹಾನಾಯಕನೀತ ಮಹಾಮಾನವ ಡಾ.ಅಂಬೇಡ್ಕರ್’ ಎನ್ನುವ ವಿಶೇಷ ಕಾರ್ಯಕ್ರಮ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ‘ಶಿಕ್ಷಣದಿಂದಲೇ ಸಮಾಜದ ಅಭಿವೃದ್ಧಿ ಸಾಧ್ಯ. ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎನ್ನುವ ಮನೋಭಾವವನ್ನು ಡಾ.ಅಂಬೇಡ್ಕರ್ ಹೊಂದಿದ್ದರು. ಅದನ್ನೇ ಇಂದು ಇಡೀ ವಿಶ್ವ ಅನುಸರಿಸುತ್ತಿದೆ’ ಎಂದರು.

ಸಾಹಿತಿ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ‘ಮಹಾಮಾನವತಾ ವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬಾಲ್ಯದಿಂದಲೇ ಅ ಸ್ಪೃಶ್ಯತೆಯ ಸಂಕಷ್ಟ ಎದುರಿಸಿದರೂ ತಮ್ಮ ವಿದ್ಯಾಭ್ಯಾಸ ಪೂರೈಸಿದರು. ಶೋಷಿತರ ಹಕ್ಕುಗಳನ್ನು ಪ್ರತಿಪಾದಿಸಿದ ಮತ್ತು ಅವರ ಸ್ವಾತಂತ್ರ್ಯಕ್ಕಾಗಿ ಹೋರಾಡುವ ನಾಯಕರಾಗಿ ಬೆಳೆದ ಅವರು, ಭಾರತ ಸ್ವತಂತ್ರವಾದ ನಂತರ ಕಾನೂನು ಸಚಿವರಾಗಿ, ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಅನುಪಮ ಕೊಡುಗೆ ನೀಡಿದರು’ ಎಂದರು.

‌ಮಾಜಿ ಮೇಯರ್ ಧರ್ಮಪ್ರಕಾಶ ಪಾಟೀಲ ಮಾತನಾಡಿದರು.ಮಾಜಿ ಉಪಮೇಯರ್ ನಂದಕುಮಾರ ಮಾಲಿಪಾಟೀಲ, ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ಕಾರ್ಯದರ್ಶಿ ಆರ್.ಜಿ.ಶಟಗಾರ, ಜೇಡಿಎಸ್ ಮುಖಂಡ ಬಸವರಾಜ ಬಿರಬಿಟ್ಟೆ, ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಟೆಂಗಳಿ, ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ದಿನೇಶ ದೊಡ್ಮನಿ, ಪ್ರಮುಖರಾದ ಶಿವಾನಂದ ಹೊನಗುಂಟಿ, ಧರ್ಮಣ್ಣ ಕೋನೇಕರ್, ಮಲ್ಲಿನಾಥ ಬಿರಾದಾರ, ಜಗದೀಶ ಧರ್ಮಪ್ರಕಾಶ ಪಾಟೀಲ, ಮಂಜುನಾಥ ಕಳಸ್ಕರ್, ಸಿದ್ಧರಾಮ ಯಳವಂತಗಿ, ನಾಗಣ್ಣ ಕುಸನೂರ, ಕವಿರಾಜ್ ಕೋಳಕೂರ, ಪ್ರಭವ ಪಟ್ಟಣಕರ್, ಎಸ್.ಎಂ.ಪಟ್ಟಣಕರ್, ರವಿಕುಮಾರ ಶಹಾಪುರಕರ್, ಸಂಗಮನಾಥ ಎಸ್.ಪುಂಡಾ, ಇರ್ಫಾನ್ ಪಟೇಲ್, ಮಲ್ಲಿಕಾರ್ಜುನ ಬರುಡೆ,ಮಲ್ಲಿಕಾರ್ಜುನ ಶ್ರೀಮಾನ್, ರಾಚಯ್ಯಸ್ವಾಮಿ, ಶಂಕರಗೌಡ ಪಾಟೀಲ, ವೀರೇಶ ವಾಲಿಶೆಟ್ಟಿ, ಮಹೇಶ ಕೋಲಕುಂದಿ, ಸಾಯಿಕಿರಣ ಮಾಲಿಪಾಟೀಲ, ಈಶ್ವರ ಮೋದಿ, ರವೀಂದ್ರ ಬಿರಾದಾರ, ರಾಜೇಶ ಬಡಿಗೇರ, ಮಹಾಂತೇಶ ಕಲಬುರಗಿ, ಮಲ್ಲು ಪಾಟೀಲ, ಮಲ್ಲಿಕಾರ್ಜುನ ಬಗಲಿ, ಅಶೋಕ ಇಂಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT