ಕಲಬುರಗಿಯಲ್ಲಿಯೇ ಲಲಿತಕಲಾ ವಿವಿ ಸ್ಥಾಪಿತವಾಗಲಿ’
‘ಬಹು ದಿನಗಳ ಬೇಡಿಕೆಯಾಗಿರುವ ಲಲಿತಕಲಾ ವಿಶ್ವವಿದ್ಯಾಲಯ ಕಲಬುರಗಿ ಜಿಲ್ಲೆಯಲ್ಲಿಯೇ ಸ್ಥಾಪಿಸಲು ಸರ್ಕಾರ ಕ್ರಮ ವಹಿಸಬೇಕು’ ಎಂದು ಪತ್ರಕರ್ತ ಶ್ರೀನಿವಾಸ ಸಿರನೂರಕರ್ ಒತ್ತಾಯಿಸಿದರು. ದೃಶ್ಯಕಲಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ‘ಈ ಭಾಗದಲ್ಲಿ ಅನೇಕ ಕಲಾವಿದರದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಮುಂದಿನ ಪೀಳಿಗೆಗೆ ಕಲೆಗಳ ಬಗ್ಗೆ ಆಸಕ್ತಿ ಮೂಡಿಸಲು ಮತ್ತು ಉಳಿಸಿ ಬೆಳೆಸಲು ವಿಶ್ವವಿದ್ಯಾಲಯಗಳ ಅವಶ್ಯಕತೆಯಿದೆ. ಅಂತರರಾಷ್ಟ್ರೀಯ ಕಲಾವಿದ ಡಾ. ಎಸ್.ಎಂ. ಪಂಡಿತ ಅವರ ಹೆಸರಿನಲ್ಲಿ ರಾಷ್ಟಮಟ್ಟದ ಪ್ರಶಸ್ತಿ ರಾಜ್ಯ ಸರ್ಕಾರ ಸ್ಥಾಪಿಸಬೇಕು’ ಎಂದು ಅವರು ಮನವಿ ಮಾಡಿದರು.