ಕಲಬುರಗಿ: ‘ಚಂದ್ರಶೇಖರ ಪಾಟೀಲ ಕ್ರೀಡಾಂಗಣ ಪ್ರದೇಶದಲ್ಲಿ ಮಹಿಳಾ ಕ್ರೀಡಾ ಸಂಕೀರ್ಣ ಮತ್ತು ಜಿಲ್ಲಾ ಕ್ರೀಡಾ ಸಂಕೀರ್ಣ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯಿಂದ 2023-24ರ ಕ್ರಿಯಾಯೋಜನೆಯಲ್ಲಿ ₹14 ಕೋಟಿ ಮೀಸಲಿರಿಸಿದ್ದು, ಈಗಾಗಲೇ ಕೆಲಸ ಪ್ರಾರಂಭವಾಗಿದೆ’ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.
ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಭಾಗಮಟ್ಟದ ದಸರಾ ಸಿ.ಎಂ ಕಪ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ನಮ್ಮ ಸರ್ಕಾರ ಬಂದ ಮೇಲೆ ಹೆಣ್ಣುಮಕ್ಕಳ ಕ್ರೀಡಾಂಗಣಕ್ಕಾಗಿ ₹4.5 ಕೋಟಿ ಮಂಜೂರು ಮಾಡಲಾಗಿದೆ. ಅಲ್ಲದೇ, ನನ್ನ ವಿಧಾನಸಭಾ ಕ್ಷೇತ್ರದಲ್ಲಿ ವಾರ್ಡ್‌ಗೆ ಒಂದು ಕ್ರೀಡಾಂಗಣ ನಿರ್ಮಿಸುವ ಬೇಡಿಕೆಯನ್ನು ಕೆಕೆಆರ್‌ಡಿಬಿಗೆ ಸಲ್ಲಿಸಿದ್ದೇನೆ’ ಎಂದು ತಿಳಿಸಿದರು.
‘1610ರಲ್ಲಿ ಆರಂಭಗೊಂಡ ದಸರಾ ಮಹೋತ್ಸವ ವಿಶ್ವವಿಖ್ಯಾತಿ ಪಡೆದಿದೆ. ಮಕ್ಕಳ ಪ್ರತಿಭೆ ಗುರುತಿಸುವಲ್ಲಿ ದಸರಾ ಕ್ರೀಡಾಕೂಟ ಪ್ರಮುಖ ಪಾತ್ರ ವಹಿಸುತ್ತಿದೆ. ವಿಭಾಗದ ಕ್ರೀಡಾಪಟುಗಳು ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಜಯ ಸಾಧಿಸಿ ಹೆಸರು ತರಬೇಕು’ ಎಂದು ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಮಾತನಾಡಿ, ‘ಶಿಕ್ಷಣದಷ್ಟೇ ಕ್ರೀಡೆಗೆ ಮಹತ್ವ ಕೊಡಬೇಕು. ಸವಲತ್ತುಗಳಿದ್ದರೆ ಮಕ್ಕಳು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುತ್ತಾರೆ. ಹಾಗಾಗಿ, ಜಿಲ್ಲಾ ಕ್ರೀಡಾಂಗಣದ ನಿರ್ವಹಣೆಗಾಗಿ ಕೆಕೆಆರ್‌ಡಿಬಿಯಿಂದ ₹3 ಕೋಟಿ ಕೊಡಬೇಕು’ ಎಂದರು.
‘ಇಲ್ಲಿನ ಕ್ರೀಡಾ ಹಾಸ್ಟೆಲ್‌ನ ಪರಿಸ್ಥಿತಿ ಸರಿಯಾಗಿಲ್ಲ. ಹಾಸ್ಟೆಲ್‌ನ 5 ಮಕ್ಕಳಿಗೆ ಬರುವ ಖರ್ಚು ಎಚ್‌ಕೆಇ ಸೊಸೈಟಿಯಿಂದ ಕೊಡಲು ತಯಾರಿದ್ದೇವೆ. ಅದೇ ರೀತಿಯಾಗಿ ಬೇರೆಬೇರೆ ಸಂಸ್ಥೆಗಳಿಂದ ಮತ್ತು ಕೆಕೆಆರ್‌ಡಿಬಿಯಿಂದ ಕೊಡುವ ವ್ಯವಸ್ಥೆ ಮಾಡಬೇಕು’ ಎಂದು ಎಚ್‌ಕೆಇ ಸಂಸ್ಥೆಯ ಅಧ್ಯಕ್ಷರೂ ಆದ ನಮೋಶಿ ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಉಪಸ್ಥಿತರಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಕಂದಾವರ ಸ್ವಾಗತಿಸಿದರು. ಈಜುಪಟು ಬಸವಪ್ರಸಾದ ಜಿ.ಪಾಟೀಲ ಕ್ರೀಡಾಕೂಟದ ಪ್ರತಿಜ್ಞಾವಿಧಿ ಬೋಧಿಸಿದರು. ಮುಜಮ್ಮಿಲ್ ಕೆಂಭಾವಿ ನಿರೂಪಿಸಿದರು. ತರಬೇತುದಾರರಾದ ಸಂಜಯ ಬಾಣದ, ರೇಣುಕಾ ಬಿರಾದಾರ, ಪ್ರವೀಣ ಪುಣೆ, ಮಚ್ಚೇಂದ್ರನಾಥ ಠಾಕೂರ್, ಅಶೋಕ ಎಂ. ಹಾಜರಿದ್ದರು.
ವಿಭಾಗಮಟ್ಟದಲ್ಲಿ ವಿಜೇತರ ವಿವರ
ವಾಲಿಬಾಲ್(ಪುರುಷ): ಕಲಬುರಗಿ (ವಿನ್ನರ್) ಬೀದರ್ (ರನ್ನರ್). ವಾಲಿಬಾಲ್(ಮಹಿಳೆ): ವಿಜಯನಗರ (ವಿನ್ನರ್) ರಾಯಚೂರು (ರನ್ನರ್). ಹ್ಯಾಂಡ್‌ಬಾಲ್(ಪುರುಷ): ಕಲಬುರಗಿ (ವಿನ್ನರ್) ವಿಜಯನಗರ (ರನ್ನರ್). ಹ್ಯಾಂಡ್‌ಬಾಲ್(ಮಹಿಳೆ): ಕೊಪ್ಪಳ (ವಿನ್ನರ್) ಕಲಬುರಗಿ (ರನ್ನರ್). ಟೇಬಲ್ ಟೆನಿಸ್(ಪುರುಷ): ಕಲಬುರಗಿ (ವಿನ್ನರ್) ರಾಯಚೂರು (ರನ್ನರ್). ಟೇಬಲ್ ಟೆನಿಸ್(ಮಹಿಳೆ): ಕಲಬುರಗಿ (ವಿನ್ನರ್) ಬಳ್ಳಾರಿ (ರನ್ನರ್). ಲಾನ್ ಟೆನಿಸ್(ಪುರುಷ): ಕಲಬುರಗಿ (ವಿನ್ನರ್) ಬಳ್ಳಾರಿ (ರನ್ನರ್). ಲಾನ್ ಟೆನಿಸ್(ಮಹಿಳೆ): ಕಲಬುರಗಿ (ವಿನ್ನರ್) ಬಳ್ಳಾರಿ (ರನ್ನರ್). ಮೆಡ್ಲೆ 4X100 ರೀಲೆ: ಕಲಬುರಗಿ–1 ಬೀದರ್–2 ಬಳ್ಳಾರಿ–3. ಜೂಡೊ(60 ಕೆ.ಜಿ): ಮಹಾಂತೇಶ ವಿಜಯನಗರ–1 ಸಂತೋಷ ವಿಜಯನಗರ–2 ಶಿವುಪ್ರಸಾದ ಕಲಬುರಗಿ–3. ಜೂಡೊ(66 ಕೆ.ಜಿ): ಸುರೇಶ ನಾಯ್ಕ ವಿಯಜನಗರ–1 ಹ್ಯಾಪಿರಾಜ್ ಕಲಬುರಗಿ–2 ಅರುಣಕುಮಾರ ಕಲಬುರಗಿ–3. ಜೂಡೊ(73 ಕೆ.ಜಿ): ಉಪೇಂದ್ರ–1 ಶ್ರೇಯಸ್–2 ಮನೀಶ್–3(ಎಲ್ಲರೂ ಕಲಬುರಗಿ). ಜೂಡೊ(81 ಕೆ.ಜಿ): ತೌಸಿಫ್ ವಿಜಯನಗರ–1 ಷಡಕ್ಷರಿ ಕಲಬುರಗಿ–2 ರಜನಿಕಾಂತ ಕಲಬುರಗಿ–3. ಜೂಡೊ(91 ಕೆ.ಜಿ): ಅಭಿಷೇಕ ಕಲಬುರಗಿ–1 ರಾಕೇಶ ಯಾದವ–2. ಜೂಡೊ(100 ಕೆ.ಜಿ):ಮಂಜಯ ನಾಯ್ಕ ವಿಜಯನಗರ–1 ರಾಕೇಶ ಎಂ.ಬಿ ವಿಜಯನಗರ–2. 100 ಮೀ ಈಜು: ಪ್ರಜ್ವಲ್ ಅರ್ನವ ಪ್ರಥಮ ಈಜು(100 ಮೀ. ಬ್ಯಾಕ್‌ಸ್ಟ್ರೋಕ್): ಪ್ರಜ್ವಲ್ ಬಳ್ಳಾರಿ–1 ಅಭಿಷೇಕ ಆರ್. ಬಳ್ಳಾರಿ–2 ನಯನ್ ಬೀದರ್–3. 200 ಮೀ. ಬ್ಯಾಕ್‌ಸ್ಟ್ರೋಕ್: ಅಭಿಷೇಕ ಬಳ್ಳಾರಿ–1 ಕೆ.ಹೊನ್ನು ಸಾಯಿ ಬಳ್ಳಾರಿ–2 ನಯನ್ ಬೀದರ್–3. ಈಜು(100 ಮೀ. ಬಟರ್‌ಫ್ಲೈ): ಪ್ರಜ್ವಲ್ ಬಳ್ಳಾರಿ–1 ಶ್ರೀಧರ ರಾಠೋಡ ಕಲಬುರಗಿ–2 ಪ್ರಥಮೇಶ ಬೀದರ್–3. ಈಜು(100 ಮೀ. ಫ್ರೀಸ್ಟೈಲ್): ಅರ್ನವ ಬೀದರ್–1 ಪ್ರಜ್ವಲ್ ಪಿ.ಕೆ ಕಲಬುರಗಿ–2 ಅಶುತೋಷ ಬಿ ಕಲಬುರಗಿ–3. 200ಮೀ. ಫ್ರೀಸ್ಟೈಲ್: ಅರ್ನವ ಬೀದರ್–1 ಕೆ.ಉತೇಜ ಬಳ್ಳಾರಿ–2 ಅಭಯ ಕುಲಕರ್ಣಿ ಬಳ್ಳಾರಿ–3. 400ಮೀ. ಫ್ರೀಸ್ಟೈಲ್: ಅರ್ನವ ಬೀದರ್–1 ಕೆ.ಉತೇಜ ಬಳ್ಳಾರಿ–2 ನಯನ್ ಬೀದರ್–3. ಈಜು(100 ಮೀ. ಮತ್ತು 200 ಮೀ. ಬ್ರೆಸ್ಟ್‌ಸ್ಟ್ರೋಕ್): ಬಸವಪ್ರಸಾದ ಕಲಬುರಗಿ–1 ಭರತ್‌ಕುಮಾರ ಬೀದರ್–2 ಅಭಯ ಕುಲಕರ್ಣಿ ಬಳ್ಳಾರಿ–3. ಮಹಿಳೆಯರ ಈಜು: 100 ಮೀ. ಫ್ರೀಸ್ಟೈಲ್: ಅದಿತಿ ಕಲಬುರಗಿ–1 ವೈಷ್ಣವಿ ಕಲಬುರಗಿ–2 ಸುದಿಕ್ಷಾ ಬಳ್ಳಾರಿ–3. 200 ಮೀ. ಫ್ರೀಸ್ಟೈಲ್: ಅದಿತಿ ಕಲಬುರಗಿ–1 ಸನ್ನಿಧಿ ಬಳ್ಳಾರಿ–2 ವಿಧಿಶಾ ಕಲಬುರಗಿ–3. 100 ಮೀ. ಬ್ಯಾಕ್‌ಸ್ಟ್ರೋಕ್: ಶ್ರಾವಣಿ ಬಳ್ಳಾರಿ–1 ಸಾನ್ವಿ ಬಳ್ಳಾರಿ–2 ಯೋಗಿನಿ ವಿಜಯನಗರ–3. 200 ಮೀ ವೈಯಕ್ತಿಕ ಮೆಡ್ಲೆ: ಸನ್ನಿಧಿ ಬಳ್ಳಾರಿ–1 ರಶ್ಮಿ ಕಲಬುರಗಿ–2 ಸುದಿಕ್ಷಾ ಬಳ್ಳಾರಿ–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.