ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಗಿ: ವಿವಿಧೆಡೆ ಭೂ ಕಂಪನ

Last Updated 9 ಅಕ್ಟೋಬರ್ 2021, 6:28 IST
ಅಕ್ಷರ ಗಾತ್ರ

ಕಾಳಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.

ಗುರುವಾರ ರಾತ್ರಿ 12.30ರಿಂದ 1 ಗಂಟೆಯ ಮಧ್ಯೆ ಅಲ್ಲಲ್ಲಿ ಭೂಮಿ ಕಂಪಿಸಿದಂತೆ ಕೇಳಿಬಂದಿದೆ. ಕಾಳಗಿ, ತೇಗಲತಿಪ್ಪಿ, ಹೊಸಳ್ಳಿ ಎಚ್., ರಾಜಾಪುರ, ಮಳಗಾ ಕೆ., ಕುಡ್ಡಳ್ಳಿ, ಕೊರವಿ, ನಾವದಗಿ ಮತ್ತು ವಜೀರ ಗಾಂವ ಗ್ರಾಮದಲ್ಲಿ ಭೂಮಿ ಕಂಪಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಶಬ್ದ ಕೇಳಿಬರುತ್ತಿದ್ದಂತೆ ಜನರು ಹೆದರಿ ಮನೆಹೊರಗೆ ಓಡಿ ಬಂದಿದ್ದಾರೆ. ಕೆಲ ಗ್ರಾಮಗಳ ಜನರು ಮತ್ತೆ ಮನೆಯೊಳಗೆ ಹೋಗದೆ ಭಯಭೀ ತರಾಗಿ ಹೊರಗಡೆ ಮಲಗಿಕೊಂಡಿದ್ದಾರೆ.

ಯಾವುದೇ ರೀತಿಯ ಹಾನಿ ವರದಿಯಾಗಿಲ್ಲ. ಗುರುವಾರ ಮಧ್ಯರಾತ್ರಿ ಕೈಕೊಟ್ಟ ವಿದ್ಯುತ್ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಬಂದಿದೆ. ಈ ಮಧ್ಯೆ ಶುಕ್ರವಾರ ಮಧ್ಯಾಹ್ನ 12.35ರಿಂದ 12.40ರ ನಡುವೆ ಹಲಚೇರಾ ಗ್ರಾಮದಲ್ಲಿ ಮತ್ತೆ ಭೂಮಿ ಕಂಪಿಸಿದ ಶಬ್ದ ಕೇಳಿಬಂದಿದೆ.

ಕಾಳಗಿ ತಹಶೀಲ್ದಾರ್ ನಾಗನಾಥ ತರಗೆ ಅವರು ಹಲಚೇರಾ, ಹೊಸಳ್ಳಿ ಎಚ್., ತೇಗಲತಿಪ್ಪಿ ಮತ್ತು ರಾಜಾಪುರ ಗ್ರಾಮಕ್ಕೆ ಭೇಟಿ ನೀಡಿ ಜನರಿಂದ ಮಾಹಿತಿ ಪಡೆದರು. ಭೂವಿಜ್ಞಾನಿಗಳನ್ನು ಕರೆಸಿ ಸತ್ಯಾಸತ್ಯತೆ ಹೊರತರಲಾಗುವುದು. ಯಾವುದೇ ಕಾರಣಕ್ಕೂ ಜನರು ಭೀತಿ ಗೊಳಪಡಬಾರದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT