ಶನಿವಾರ, ಜನವರಿ 29, 2022
23 °C

ಕಲಬುರಗಿ: ಐನಾಪುರ ಸುತ್ತ ಲಘು ಕಂಪನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Getty images DH FILE

ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಐನಾಪುರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಬೆಳಿಗ್ಗೆ 6.27ಕ್ಕೆ ಲಘು‌ ಭೂಕಂಪನ ಸಂಭವಿಸಿದೆ. ಭೂಮಿಯಿಂದ ಸದ್ದು ಕೇಳಿ ಬಂದಿದೆ. ಜತೆಗೆ ಭೂಮಿ‌ ನಡುಗಿದ ಅನುಭವವಾಯಿತು ಎಂದು ಶಿಕ್ಷಕ ಸಂತೋಷ ಗುತ್ತೇದಾರ ತಿಳಿಸಿದ್ದಾರೆ.

ನಾನು ಬೆಳಿಗ್ಗೆ ಮಕ್ಕಳಿಗೆ ಆನ್‌ಲೈನ್ ಪಾಠ ಮಾಡುತ್ತಿರುವಾಗ ಭೂಮಿ‌ ನಡುಗಿದಂತಾಯಿತು. ಇದೇ ಅನುಭವವನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದರು ಎಂದು ಅವರು ತಿಳಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಐನಾಪುರ ಸಮೀಪ ಬರುವ ಬೀದರ್ ಜಿಲ್ಲೆಯ ಕೂಡಂಬಲ್ ಗ್ರಾಮದಲ್ಲಿ ಭೂಮಿಯಿಂದ ಸದ್ದು ಕೇಳಿ ಬರುತ್ತಿದೆ. ಈಗ ಐನಾಪುರ ಸುತ್ತಲಿನ ಗ್ರಾಮದಲ್ಲೂ ಲಘು ಕಂಪನ ಸಂಭವಿಸಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಶರಣ ಶಿರಸಗಿಯ ಭೂಕಂಪನ‌ ಮಾಪಕ‌ ಕೇಂದ್ರದಲ್ಲಿ ಯಾವುದೇ ದತ್ತಾಂಶ ದಾಖಲಾಗಿಲ್ಲ. ಅದರೆ ಹೈದರಾಬಾದ್‌ ರಾಷ್ಟ್ರೀಯ ಭೂ ಭೌತ ವಿಜ್ಞಾನ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರೆ ಅವರ ಬಳಿ ದತ್ತಾಂಶ ಸಿಗಬಹುದು ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ತಾಲ್ಲೂಕಿನ ಗಡಿಕೇಶ್ವಾರದಲ್ಲೂ ಲಘು ಕಂಪನ ಸಂಭವಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು