ಕಲಬುರಗಿ: ‘ಭಾರತದ ಆರ್ಥಿಕ ಮತ್ತು ವಾಣಿಜ್ಯ ಕ್ಷೇತ್ರದ ವಿವಿಧ ವಲಯಗಳಲ್ಲಿ ಉದ್ಯಮಶೀಲತೆ ರಚನಾತ್ಮಕವಾಗಿ ಬೆಳೆವಣಿಗೆ ಕಂಡಿದೆ. 2030ರ ವೇಳೆಗೆ ಯುವಕರ ಜನಸಂಖ್ಯೆ ಅನುಸಾರ ‘ಉದ್ಯೋಗ ಹುಡುಕಾಟ’ಕ್ಕಿಂತ ‘ಉದ್ಯೋಗ ಸೃಷ್ಟಿ’ ಸಂಸ್ಕೃತಿ ಬೆಳೆಸುವುದು ಆರ್ಥಿಕ ವಲಯದ ಗುರಿ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದ ಮಾಜಿ ಡೀನ್ ಪ್ರೊ. ಬಿ.ಎಂ.ಕನ್ನಹಳ್ಳಿ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗ ಹಾಗೂ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಸಹಯೋಗದಲ್ಲಿ ‘ಉದ್ಯಮಶೀಲತಾ ಅಭಿವೃದ್ಧಿಗೆ ಸಾಂಸ್ಥಿಕ ಬೆಂಬಲ’ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತ ದೇಶ ಜನಸಂಖ್ಯೆ ಲಾಭವನ್ನು ಅತ್ಯಧಿಕವಾಗಿ ಹೊಂದಿದೆ. 2030ರ ವೇಳೆಗೆ ಆರ್ಥಿಕ ವಲಯ ಮತ್ತು ಬಹು ನಿರೀಕ್ಷೆಯ ವಾಣಿಜ್ಯೋದ್ಯಮ ಕ್ಷೇತ್ರಗಳಲ್ಲಿ ಸುಮಾರು 90 ಮಿಲಿಯನಷ್ಟು ಉದ್ಯೋಗ ಸೃಷ್ಟಿ, ತಂತ್ರಜ್ಞಾನ ಬಳಕೆ, ನಾವೀನ್ಯತೆ ಮೂಲಕ ಉನ್ನತ ಬದಲಾವಣೆಗೆ ಉದ್ಯಮಿಗಳು, ನೇತಾರರು ಬದಲಾವಣೆ ಏಜೆಂಟ್ಗಳಾಗಿ ಕಾರ್ಯನಿರ್ವಹಿಸುವ ಸಾಧ್ಯತೆಗಳಿವೆ’ ಎಂದರು.

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಹುಬ್ಬಳ್ಳಿ ಶಾಖೆಯ ಸಹಾಯಕ ಪ್ರದಾನ ವ್ಯವಸ್ಥಾಪಕ ಚಂದ್ರಶೇಖರ್ ಜಿ.ಟೋನಿ ಮಾತನಾಡಿ, ‘ಹಣಕಾಸು ಸಂಸ್ಥೆಗಳು ನವೋದ್ಯಮಗಳು ಮತ್ತು ಸಣ್ಣ ವ್ಯವಹಾರಗಳನ್ನು ಬೆಳೆಸಲು ತರಬೇತಿ, ಆರ್ಥಿಕ ನೆರವು, ಸಲಹೆ ಜತೆ ಮೂಲಸೌಕರ್ಯ ಒದಗಿಸುತ್ತವೆ’ ಎಂದು ಹೇಳಿದರು.

ರಾಜ್ಯ ಹಣಕಾಸು ಸಂಸ್ಥೆಯ ಕಲಬುರಗಿ ಶಾಖೆಯ ವ್ಯವಸ್ಥಾಪಕ ಚಂದ್ರಕಾಕಾಂತ ಚಂದಾಪುರ ಅವರು ವಿವಿಧ ಯೋಜನೆಗಳ ಬಗ್ಗೆ ವಿವರಿಸಿದರು.

ವಾಣಿಜ್ಯಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರೊ.ರಾಜನಾಳ್ಕರ್ ಲಕ್ಷ್ಮಣ ಮಾತನಾಡಿ, ‘ಆರ್ಥಿಕ ಕ್ಷೇತ್ರ ಮತ್ತು ಉದ್ಯಮ ವಲಯಗಳಲ್ಲಿ ಯುವಕರದ್ದು ಪ್ರಮುಖ ಪಾತ್ರ. ಸುಸ್ಥಿರ ಅಭಿವೃದ್ಧಿಯಲ್ಲಿ ಯುವಕರೇ ಭವಿಷ್ಯದ ನಿರ್ಣಾಯಕರು’ ಎಂದರು.

ಕಾರ್ಯಾಗಾರದಲ್ಲಿ ಅತಿಥಿ ಉಪನ್ಯಾಸಕರಾದ ರೂಪಶ್ರೀ, ವಿಜಯಲಕ್ಷ್ಮಿ, ಸಂಶೋಧನಾ ವಿದ್ಯಾರ್ಥಿಗಳಾದ ಬಸವರಾಜ, ವಿಜಯಲಕ್ಷ್ಮಿ, ಪ್ರೇಮ್ ಸಿಂಗ್, ಶಿವಾನಂದ, ಗಿರಿರಾಜ, ಆನಂದಕುಮಾರ, ನಾಗಮ್ಮ, ಶರಣು, ಮಹಾಂತೇಶ, ವಿಠಲ್ ತಗನೂರ, ಶಾಂತಪ್ಪ ಬೇಲೂರು, ರಮೇಶ, ಬಸವರಾಜ ಸಾಹು ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.