ಶುಕ್ರವಾರ, ಅಕ್ಟೋಬರ್ 7, 2022
24 °C

ಶಹಾಬಾದ್, ವಾಡಿಯಲ್ಲಿ ಅಬಕಾರಿ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಜಿಲ್ಲೆಯ ಶಹಾಬಾದ್ ಹಾಗೂ ಚಿತ್ತಾಪುರ ತಾಲ್ಲೂಕಿನ ವಾಡಿಯಲ್ಲಿ ವಿವಿಧ ಮನೆಗಳ ಮೇಲೆ ಸೋಮವಾರ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು ಕಳ್ಳಭಟ್ಟಿ, ಬೆಲ್ಲದ ಕೊಳೆ ಹಾಗೂ ಕಲಬೆರಕೆ ಸೇಂದಿಯನ್ನು ವಶಪಡಿಸಿಕೊಂಡಿದ್ದಾರೆ.

ಶಹಾಬಾದ್‌ನ ಮಡ್ಡಿ ನಂ 2 ಏರಿಯಾದ ಸಕ್ಕುಬಾಯಿ ರಮೇಶ ಚವ್ಹಾಣ, ರೇಣುಕಾ ಅರ್ಜುನ ಚವ್ಹಾಣ, ಸುನೀತಾಬಾಯಿ ಚಂದ್ರಕಾಂತ ಚವ್ಹಾಣ ವಾಡಿಯ ನಾಗಮ್ಮಾ ನಂದಕುಮಾರ ಬನಸುಡೆ ಎಂಬುವವರನ್ನು ಬಂಧಿಸಲಾಗಿದೆ. 

ಶಹಾಬಾದ್‌ನ ಮೂರು ಮನೆಗಳಲ್ಲಿ 8 ಲೀಟರ್‌‌ ಕಳ್ಳಭಟ್ಟಿ ಸರಾಯಿ ಹಾಗೂ 40 ಲೀಟರ್‌‌ ಬೆಲ್ಲದ ಕೊಳೆ ಹಾಗೂ ವಾಡಿಯ ವಿಜಯ ನಗರ ಏರಿಯಾದಲ್ಲಿ 30 ಲೀಟರ್‌‌ ಕಲಬೆರಕೆ ಸೇಂದಿಯನ್ನು ಸಂಗ್ರಹಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಅವುಗಳನ್ನು ವಶಪಡಿಸಿಕೊಂಡು ನಾಶಪಡಿಸಿದರು.

ದಾಳಿಯಲ್ಲಿ ಅಬಕಾರಿ ಕಾನ್‌ಸ್ಟೆಬಲ್‌ಗಳಾದ ಶಿವಾನಂದ, ಶರಣಬಸಪ್ಪ, ನಾಗರಾಜ ಹಾಗೂ ವಾಹನ ಚಾಲಕ ಭಾಗವಹಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು