ಭಾನುವಾರ, ಜೂನ್ 26, 2022
21 °C

ಕಲಬುರ್ಗಿ: ಕಲಾವಿದರಿಗೆ ಧನ ಸಹಾಯ ನೀಡಲು ರಂಗಕರ್ಮಿ ಸುಜಾತಾ ಜಂಗಮಶೆಟ್ಟಿ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಈ ನಾಡಿನ ಸಂಸ್ಕೃತಿ, ಭಾಷೆ ಉಳಿಸುವ ನಿಟ್ಟಿನಲ್ಲಿ ಬದುಕನ್ನು ಮುಡಿಪಾಗಿಟ್ಟಿರುವ 35 ವರ್ಷದೊಳಗಿನ ಯುವ ರಂಗಕಲಾವಿದರಿಗೂ ಸರ್ಕಾರ ಧನ ಸಹಾಯ ನೀಡಬೇಕು’ ಎಂದು ಜಿಲ್ಲಾ ಕನ್ನಡ ಜಾಗೃತ ಸಮಿತಿ ಸದಸ್ಯೆಯೂ ಆದ ರಂಗಕರ್ಮಿ ಸುಜಾತಾ ಜಂಗಮಶೆಟ್ಟಿ ಮನವಿ ಮಾಡಿದ್ದಾರೆ.

‘ರಾಜ್ಯದಲ್ಲಿ ಯುವ ರಂಗ ಕಲಾವಿದರು ಕೋವಿಡ್–19 ಸಂದರ್ಭದಲ್ಲಿ ತುಂಬಾ ಸಂಕಷ್ಟದಲ್ಲಿದ್ದಾರೆ. ರಂಗಭೂಮಿ ಕಟ್ಟುವಲ್ಲಿ ಇವರ ಸೇವೆ ಗಣನೀಯವಾದದ್ದು, ಹೀಗಾಗಿ ಸರ್ಕಾರ ಈ ಸಂದರ್ಭದಲ್ಲಿ ಕಲಾವಿದರ ಮಧ್ಯೆ ವಯಸ್ಸಿನ ತಾರತಮ್ಯ ಮಾಡದೇ ಆರ್ಥಿಕ ಪ್ಯಾಕೇಜ್‌ನಡಿ ಧನ ಸಹಾಯ ಒದಗಿಸಬೇಕು’ ಎಂದು ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.