ಮಂಗಳವಾರ, ಅಕ್ಟೋಬರ್ 4, 2022
25 °C

ಇನ್ನರ್ ವ್ಹೀಲ್ ಕ್ಲಬ್‌ನಿಂದ ಶಿಕ್ಷಕರಿಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಇಲ್ಲಿನ ಇನ್ನರ್ ವ್ಹೀಲ್ ಕ್ಲಬ್ ಆಫ್‌ ಗುಲಬರ್ಗಾ (ಉತ್ತರ) ವಿಭಾಗದ ವತಿಯಿಂದ ಐವರಿಗೆ ಅತ್ಯುತ್ತಮ ಶಿಕ್ಷಕರು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯಶ್ಎಸ್ವಿ ಮಾರ್ಗದರ್ಶಿ ಕೋಚಿಂಗ್ ಮತ್ತು ಟ್ರೇನಿಂಗ್ ಸೆಂಟರ್‌ನ ಡಾ. ಜಯಶ್ರೀ ರೆಡ್ಡಿ, ಪತಂಜಲಿ ಯೋಗ ತರಬೇತುದಾರ ಶಿವಾನಂದ ಸಾಲಿಮಠ, ಸರ್ಕಾರಿ ಶಾಲೆಯ ಸಹ ಶಿಕ್ಷಕಿ ಶಿವಲೀಲಾ ಶೆಟಕಾರ, ಅಂಬುಬಾಯಿ ಕಿವುಡ ಮತ್ತು ಮೂಗ ಮಕ್ಕಳ ಶಾಲೆಯ ಶಿಕ್ಷಕಿ ಸಂಗೀತಾ ಠಾಕೂರ್, ಕುಸನೂರಿನ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುವರ್ಣಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್‌ಗಳನ್ನು ವಿತರಿಸಲಾಯಿತು.

ಕ್ಲಬ್‌ ಅಧ್ಯಕ್ಷೆ ಸುಷ್ಮಾ ಹಡಗಲಿಮಠ, ಕಾರ್ಯದರ್ಶಿ ಸವಿತಾ ಮಠ, ಮಾಧವಿ ಕಿಣಗಿ, ಸವಿತಾ ಹಾಲಳ್ಳಿ, ಪ್ರಿಯಾಂಕಾ, ಲಕ್ಷ್ಮಿ ಅಡಕಿ ಭಾಗವಹಿಸಿದ್ದರು. ಡಾ.ಸಂಧ್ಯಾ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು