ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲಬುರ್ಗಿ ಪ್ರತಿಭಾವಂತ ಕಲಾವಿದರ ನಾಡು’

ಕರ್ನಾಟಕ ಲಲಿಕಲಾ ಅಕಾಡೆಮಿ ಅಧ್ಯಕ್ಷ ಡಿ ಮಹೇಂದ್ರ ಬಣ್ಣನೆ
Last Updated 18 ಡಿಸೆಂಬರ್ 2020, 2:06 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕಲಬುರ್ಗಿ ಅನೇಕ ಪ್ರತಿಭಾವಂತ ಕಲಾವಿದರ ನಾಡಾಗಿದ್ದು ಇಲ್ಲಿ ಅನೇಕ ರೀತಿಯಲ್ಲಿ ಕಲೆಯಲ್ಲಿ ಕೃಷಿ ಮಾಡಿದವರಿದ್ದಾರೆ’ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ ಹೇಳಿದರು.

ನಗರದ ಮಾತೋಶ್ರೀ ನೀಲಗಂಗಮ್ಮಾ ಗುರುಪ್ಪಾ ಅಂದಾನಿ ಆರ್ಟ್‌ ಗ್ಯಾಲರಿಯಲ್ಲಿಗುರುವಾರ ಚಿತ್ರಕಲಾವಿದ ರಾಮಗಿರಿ ಪೊಲೀಸ್‌ ಪಾಟೀಲ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕೊರೊನಾದ ಸಂಕಷ್ಟದ ಕಾಲದಲ್ಲಿಯೂ ಕಲಾವಿದರು ಕಲಾಪ್ರದರ್ಶನಗಳನ್ನು ಹಮ್ಮಿಕೊಳ್ಳುವ ಮೂಲಕ ಕಲೆಯ ಬಗ್ಗೆ ತಮಗಿರುವ ಒಲುವನ್ನು ಎತ್ತಿ ತೋರಿಸಿದ್ದಾರೆ. ಲಲಿಕಲಾ ಅಕಾಡೆಮಿಯು ಕರ್ನಾಟಕದ ಕಲಾಕ್ಷೇತ್ರದ ಬೆಳವಣಿಗೆಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರಲ್ಲಿ ಹಿರಿಯ ಕಲಾವಿದರ ಪ್ರಶಸ್ತಿ, ಸೀನಿಯರ್ ಫೆಲೋಶಿಪ್, ಕಲಾ ಶಿಬಿರ ಕಾರ್ಯಾಗಾರ, ವಾರ್ಷಿಕ ಪ್ರದರ್ಶನಗಳಂತಹ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡಿದೆಲ್ಲದೆ, ಎಲೆ ಮರೆಯ ಕಾಯಿಯಂತೆ ಇದ್ದ ಕಲಾ ಕ್ಷೇತ್ರದಲ್ಲಿ ಇಂತಹ ಕಲಾವಿದರನ್ನು ಗುರುತಿಸಿ ಪ್ರದರ್ಶನಗಳನ್ನು ನೀಡುವ ನೂತನ ಕಾರ್ಯಕ್ರಮವನ್ನು ಮಾಡಲಾಗುವುದು’ ಎಂದು ಹೇಳಿದರು.

ಕಲಾ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಕಲಾ ಕಾರ್ಯಾಗಾರವನ್ನು ಮಾಡುವ ನಿಟ್ಟಿನಲ್ಲಿ ಯೋಚಿಸಲಾಗುತ್ತದೆ. ಕಲಾಮೇಳವನ್ನು ಆಯೋಜಿಸುವ ಕುರಿತು ಚಿಂತನೆ ನಡೆಸಿದೆ ಎಂದು ಹೇಳಿದರು.

ಶಿಲ್ಪ ಕಲಾವಿದ ತಲ್ಲೂರ ಎಲ್.ಎನ್, ಅಕಾಡೆಮಿ ಸದಸ್ಯ ಎಚ್.ವಿ. ಮಂತಟ್ಟಿ ಅತಿಥಿಗಳಾಗಿ ಆಗಮಿಸಿದ್ದರು. ಡಾ.ವಿ.ಜಿ.ಅಂದಾನಿ ಅಧ್ಯಕ್ಷತೆ ವಹಿಸಿದ್ದರು. ಡಾ ಕಾಶಿನಾಥ ನಿರೂಪಿಸಿದರು.

ರಾಮಗಿರಿ ಪೊಲೀಸ್‌ ಪಾಟೀಲ ಅವರ ಕಲಾಕೃತಿಗಳು ಡಿಸೆಂಬರ್ 19ರವರೆಗೆ ಪ್ರದರ್ಶನಗೊಳ್ಳಲಿವೆ. ಮುಂಜಾನೆ 11ರಿಂದ ಸಂಜೆ 5ರವರೆಗೆ ಸಾರ್ವಜನಿಕರು, ಕಲಾವಿದರು, ಕಲಾಆಸಕ್ತರು ಚಿತ್ರಕಲಾ ಪ್ರದರ್ಶನ ವೀಕ್ಷಿಸಬಹುದು ಎಂದು ಚಿತ್ರಕಲಾವಿದ ಮತ್ತು ಛಾಯಾಚಿತ್ರಕಾರ ನಾರಾಯಣ ಎಂ.ಜೋಶಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT