ಸೋಮವಾರ, ಆಗಸ್ಟ್ 19, 2019
22 °C

‘ನೆರೆ– ಬರ ಎರಡನ್ನೂ ಎದುರಿಸಲು ಸಿದ್ಧರಾಗಿ’

Published:
Updated:
Prajavani

ಕಲಬುರ್ಗಿ: ‘ಪ್ರವಾಹದಿಂದ ಜಿಲ್ಲೆಯ ನಾಲ್ಕು ತಾಲ್ಲೂಕುಗಳು ತತ್ತರಿಸಿವೆ. ಉಳಿದ ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಈ ಎರಡೂ ಪರಿಸ್ಥಿತಿಗಳನ್ನು ಎದುರಿಸಲು ಅಧಿಕಾರಿಗಳು ಸಿದ್ಧರಾಗಬೇಕು’ ಎಂದು ಸಂಸದ ಡಾ.ಉಮೇಶ ಜಾಧವ ಸೂಚಿಸಿದರು.

‘ಹಲವು ಗ್ರಾಮಗಳಲ್ಲಿ ಇನ್ನೂ ಕುಡಿಯುವ ನೀರಿನ ಸಮಸ್ಯೆ ಇದೆ. ನೀರು ಪೂರೈಸುವ ಟ್ಯಾಂಕರ್ ಸ್ಥಗಿತಗೊಳಿಸಲಾಗಿದೆ ಎಂದು ಸಾರ್ವಜನಿಕರಿಂದ ದೂರು ಕೇಳಿಬರುತ್ತಿದೆ. ನೀರಿನ ಸಮಸ್ಯೆ ಇರುವ ಕಡೆ ನಿರಂತರ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು’ ಎಂದು ಅವರು ನಗರದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ತಿಳಿಸಿದರು.

‘ಪ್ರವಾಹ ಪೀಡಿತ ಸ್ಥಳಗಳಲ್ಲಿ ಸಾಂಕ್ರಾಮಿಕ ರೋಗ ತಡೆಗೆ ವೈದ್ಯಕೀಯ ತಂಡ, ಜಾನುವಾರಗಳ ರಕ್ಷಣೆಗೆ ಪಶು ಇಲಾಖೆಯಿಂದ ವ್ಯಾಕ್ಸಿನ್ ನೀಡಲು ತಂಡ ರಚಿಸಬೇಕು’ ಎಂದರು.

Post Comments (+)