ಬುಧವಾರ, ಜುಲೈ 28, 2021
29 °C

ವಿದ್ಯುತ್‌ ತಂತಿ ಹರಿದುಬಿದ್ದು ರೈತ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ತಾಲ್ಲೂಕಿನ ಖಣದಾಳ ಗ್ರಾಮದ ಹೊಲದಲ್ಲಿ ಶುಕ್ರವಾರ ವಿದ್ಯುತ್ ತಂತಿ ಹರಿದುಬಿದ್ದು ರೈತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.‌

ದಗಡು ರೂಪ್ಲಾ ರಾಠೋಡ (59) ಮೃತಪಟ್ಟವರು. ತಾಂಡಾದ ಸಮೀಪದಲ್ಲಿರುವ ತಮ್ಮ ಹೊಲದಲ್ಲಿ ಭೂಮಿ ಹದಗೊಳಿಸಲು ಕುಂಟೆ ಹೊಡೆಯುವ ಕೆಲಸದಲ್ಲಿ ತೊಡಿಗಿಸಿಕೊಂಡಿದ್ದರು. ಮಧ್ಯಾಹ್ನ ಜೋರಾಗಿ ಗಾಳಿ ಬೀಸಿದ್ದರಿಂದ ವಿದ್ಯುತ್ ತಂತಿ ಕಡಿದುಕೊಂಡು ರೈತನ ಮೇಲೆಯೇ ಬಿದ್ದಿದೆ. ಇದನ್ನು ನೋಡಿ ಅಕ್ಕಪಕ್ಕದ ಹೊಲದವರು ದೌಡಾಯಿಸಿ ಎತ್ತುಗಳನ್ನು ಬಿಚ್ಚಿ ಓಡಿಸಿದರು. ಆದರೆ, ರೈತನನ್ನು ಪಾರು ಮಾಡಲು ಆಗಲಿಲ್ಲ.

ಫರಹತಾಬಾದ್‌ ಇನ್‍ಸ್ಪೆಕ್ಟರ್ ಎಂ.ಬಿ.ಚಿಕ್ಕಣ್ಣನವರ ಸ್ಥಳಕ್ಕೆ ಭೇಟಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.