ಶುಕ್ರವಾರ, ಅಕ್ಟೋಬರ್ 22, 2021
20 °C

ಸಂಪಿಗೆ ನಗರ; ಆರೋಗ್ಯ ತಪಾಸಣೆ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರದ ಹಳೆ‌ ಜೇವರ್ಗಿ ರಸ್ತೆಯ ಸಂಪಿಗೆ ನಗರದ ಈಶ್ವರ ದೇವಾಲಯ ಸದ್ಭಕ್ತ ಮಂಡಳಿ ವತಿಯಿಂದ ಏರ್ಪಡಿಸಿದ್ದ ಎರಡು ದಿನಗಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಭಾನುವಾರ ಸಮಾರೋಪಗೊಂಡಿತು.

ಕೆಕೆಆರ್‌ಡಿಬಿ ಅಧ್ಯಕ್ಷರೂ ಆದ ಸ್ಥಳೀಯ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಶಿಬಿರವನ್ನು ಉದ್ಘಾಟಿಸಿದರು. ಶಿಬಿರದಲ್ಲಿ ಎರಡೂ ದಿನ ಸೇರಿ ಸಾವಿರಕ್ಕೂ ಹೆಚ್ಚು ಜನ ಆರೋಗ್ಯ ತಪಾಸಣೆಗೆ ಒಳಗಾದರು.

200 ಜನ ಹಿರಿಯ ನಾಗರಿಕರಿಗೆ ನೇತ್ರ ತಪಾಸಣೆ ಮಾಡಿ ಉಚಿತವಾಗಿ ಕನ್ನಡಕ‌ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡಲಾಯಿತು. ಅಲ್ಲದೆ, ಮಧುಮೇಹ, ರಕ್ತದೊತ್ತಡ, ದಂತ, ನೇತ್ರ ತಪಾಸಣೆ ನಡೆಸಿ, ಅಗತ್ಯ ಚಿಕಿತ್ಸೆ ನೀಡಲಾಯಿತು.

ವಿಧಾನ ಪರಿಷತ್ ಮಾಜಿ‌ ಸದಸ್ಯ ಅಲ್ಲಮಪ್ರಭು ಪಾಟೀಲ, ಮಾಜಿ ಸಚಿವ ರೇವುನಾಯಕ‌ ಬೆಳಮಗಿ, ಮುಖಂಡ ಕೃಷ್ಣಾಜಿ, ಪಾಲಿಕೆ ಸದಸ್ಯೆ‌ ನಿಂಗಮ್ಮ ಕಟ್ಟಿಮನಿ, ದೇವಸ್ಥಾನ‌ ಮಂಡಳಿ ಅಧ್ಯಕ್ಷ ರಾಜಶೇಖರ ಪಾಟೀಲ ಅಪ್ಪಾಜಿ, ಮುಖಂಡರಾದ ಚಂದ್ರಕಾಂತ ಗುತ್ತೇದಾರ, ಅರುಣಕುಮಾರ ಪಾಟೀಲ, ಮರಲಿಂಗಪ್ಪ ಕಿಣಕೇರಿ, ವಿರೇಶ ಎಂ.ಕ್ಷತ್ರಿಯ, ಪ್ರೇಮಕುಮಾರ ರಾಠೋಡ, ರಾಜೇಶ ಮಾನೆ, ತಿಪ್ಪಣ್ಣ ದೊಡಮನಿ ಇದ್ದರು.

ಅಶ್ವತ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಸದಾಶಿವ ನೇತ್ರಾಲಯ, ಸಪ್ತಗಿರಿ ಆಪ್ಟಿಕಲ್ಸ್, ಶ್ರೀಸಾಯಿ ಹಲ್ಲಿನ ಆಸ್ಪತ್ರೆ, ಪ್ರಧಾನಮಂತ್ರಿ ಜನೌಷಧ ಕೇಂದ್ರದ ವೈದ್ಯರು ಆರೋಗ್ಯ ತಪಾಸಣೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು