ಶುಕ್ರವಾರ, ಮೇ 14, 2021
29 °C

ಕಲಬುರ್ಗಿ: 500 ಜನರಿಗೆ ಉಚಿತ ಊಟ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಚಂದು ಪಾಟೀಲ ಪ್ರತಿಷ್ಠಾನದ ವತಿಯಿಂದ ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ ಹಾಗೂ ಅವರ ಪುತ್ರ, ಕರ್ನಾಟಕ ನವೀಕರಿಸಬಹುದಾದ ಇಂಧನ ಮೂಲಗಳ ನಿಗಮದ ಅಧ್ಯಕ್ಷ ಚಂದು ಪಾಟೀಲ ಅವರು ನಗರದ ಬಸವೇಶ್ವರ ಆಸ್ಪತ್ರೆ, ಜಿಮ್ಸ್‌, ಇಎಸ್‌ಐ ಆಸ್ಪತ್ರೆಗಳಿಗೆ ತೆರಳಿ 500 ಜನರಿಗೆ ಊಟದ ಪ್ಯಾಕೆಟ್ ವಿತರಿಸಿದರು.

ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್ ನಿಯಮ ಜಾರಿಗೊಳಿಸಿದ್ದರಿಂದ ಕೋವಿಡ್‌ ಸೇರಿ ವಿವಿಧ ರೋಗಗಳಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳ ಸಹಾಯಕರು ಊಟ ಇಲ್ಲದೆ ಪರದಾಡುತ್ತಿದ್ದರು. ಅದನ್ನು ಕಂಡು ಚಂದು ಪಾಟೀಲ್ ಫೌಂಡೇಷನ್ ಮೂಲಕ ಊಟದ ವ್ಯವಸ್ಥೆ ಮಾಡಲಾಯಿತು.

ಹೋಟೆಲ್‌ಗಳು ಬಂದ್ ಆಗಿ ರೋಗಿಗಳ ಜತೆ ಬಂದ ಸಹಾಯಕರಿಗೆ ಊಟದ ಸಮಸ್ಯೆ ತೀವ್ರವಾಗಿ ಕಾಡುತ್ತಿತ್ತು. ಮೂರು ದಿನದಿಂದ ಊಟ ಸಿಗದೆ ಪರದಾಡುತ್ತಿದ್ದರು. ಬಡ ಜನತೆ ನೋವಿಗೆ ಮಿಡಿಯುವ ಉದ್ದೇಶದಿಂದ ಉಟ ವಿತರಿಸಲಾಯಿತು ಎಂದು ಚಂದು ಪಾಟೀಲ ತಿಳಿಸಿದರು.

ನಿತ್ಯ 500 ಊಟ: ಲಾಕ್‌ಡೌನ್‌ ಮುಗಿಯುವವರೆಗೂ ನಿತ್ಯ 500 ಊಟದ ಪ್ಯಾಕೆಟ್‌ಗಳನ್ನು ನೀಡಲಾಗುವುದು ಎಂದು ಬಿ.ಜಿ. ಪಾಟೀಲ ಪ್ರಕಟಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು