ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಕೇಶ್ವಾರ ಲಘು ಕಂಪನ; ಸ್ಫೋಟಕ ಸದ್ದಿಗೆ ಬೆಚ್ಚಿಬಿದ್ದ ಜನ;  ರಾತ್ರಿ ಜಾಗರಣೆ

Last Updated 2 ಏಪ್ರಿಲ್ 2021, 5:34 IST
ಅಕ್ಷರ ಗಾತ್ರ

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಶುಕ್ರವಾರ ನಸುಕಿನಲ್ಲಿ 7 ಬಾರಿ ಭೂಮಿಯಿಂದ ವಿಚಿತ್ರವಾದ ಸ್ಫೋಟಕ ಸದ್ದು ಕೇಳಿಸಿದರೆ ಒಮ್ಮೆ ಲಘು ಕಂಪನವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಬೆಳಿಗ್ಗೆ 3.24ಕ್ಕೆ ಭೂಮಿ ಅಲುಗಾಡಿದ ಅನುಭವವಾಗಿದೆ ಇದರ ಬೆನ್ನಲ್ಲಿಯೇ ಅರ್ಧ ಗಂಟೆ ಸಮಯದಲ್ಲಿಯೇ 7 ಬಾರಿ ಭೂಮಿಯಿಂದ ಸದ್ದು ಕೇಳಿಬಂದಿದೆ ಎಂದು ಗ್ರಾ.ಪಂ ಮಾಜಿ ಸದಸ್ಯ ವೀರೇಶ ಬೆಳಕೇರಿ ಮುಖಂಡರಾದ ಸಿದ್ದು ಹಲಚೇರಾ ಮತ್ತು ಮಂಗಳಮೂರ್ತಿ ಪ್ರಜಾವಾಣಿಗೆ ತಿಳಿಸಿದರು.

ಭೂಮಿಯಿಂದ ಪದೇ ಪದೇ ಸದ್ದು ಕೇಳಿ ಬರುತ್ತಿರುವುದರಿಂದ ಬೆಚ್ಚಿಬಿದ್ದ ಜನ ಬೆಳಿಗ್ಗೆ 3.30ರಿಂದ ಮನೆಗಳಿಂದ ಹೊರ ಬಂದು ಸಾರ್ವಜನಿಕ ಸ್ಥಳಗಳಲ್ಲಿ ಕುಳಿತು ರಾತ್ರಿ ಕಳೆದಿದ್ದಾರೆ.

ಮಲ್ಲಿಕಾರ್ಜುನ ಮಂದಿರ, ಹನುಮಾನ ಮಂದಿರ, ಗ್ರಾ.ಪಂ ಕಚೇರಿ ಮೊದಲಾದ ಕಡೆ ಜನ ಜಮಾಯಿಸಿದ್ದರು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT