ಅಫಜಲಪುರ: ತಾಲ್ಲೂಕಿನ ಬಡದಾಳ ಗ್ರಾಮದಲ್ಲಿ ತೊಗರಿ ಮತ್ತು ಕಬ್ಬಿನ ಹೊಲದಲ್ಲಿ ಪ್ರತ್ಯೇಕವಾಗಿ ಬೆಳೆಸಿದ್ದ 63 ಗಾಂಜಾ ಗಿಡ ಹಾಗೂ ಒಂದು ನಾಡ ಪಿಸ್ತೂಲ್, 1 ಜೀವಂತ ಗುಂಡನ್ನು ಅಫಜಲಪುರ ಪೊಲೀಸರು ಮಂಗಳವಾರ ವಶಪಡಿಸಿಕೊಂಡು ಆರೋಪಿ ಜಯಾನಂದ ಮೂಲಂಗೆ ಎಂಬಾತನನ್ನು ಬಂಧಿಸಿದ್ದಾರೆ.

‘ನನ್ನ ಸ್ವಂತ ತೊಗರಿ ಹೊಲದಲ್ಲಿ 41 ಮತ್ತು ವರ್ಷಕ್ಕೆ ಷರತ್ತಿನ ಮೇಲೆ ತೆಗೆದುಕೊಂಡ ಚಿಕ್ಕಪ್ಪನ ಕಬ್ಬಿನ ಗದ್ದೆಯಲ್ಲಿ 22 ಗಾಂಜಾ ಗಿಡಗಳನ್ನು ಬೆಳೆದಿದ್ದೇನೆ. ಮಹಾರಾಷ್ಟ್ರದ ಬೇರೆ ಬೇರೆ ಕಡೆ ಮಾರಾಟ ಮಾಡುತ್ತೇನೆ. ಹೊಲದಲ್ಲಿ ನಾನೊಬ್ಬನೇ ಇರುವುದರಿಂದ ಜೀವರಕ್ಷಣೆಗಾಗಿ ನಾಡ ಪಿಸ್ತೂಲ್ ಮತ್ತು ಒಂದು ಜೀವಂತ ಗುಂಡು ಇಟ್ಟುಕೊಂಡಿದ್ದೇನೆ’ ಎಂದು ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.