ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣ್ಯಕೋಟಿ ಯೋಜನೆಗೆ ₹ 1.17 ಕೋಟಿ ವಂತಿಗೆ

Last Updated 6 ಜನವರಿ 2023, 12:22 IST
ಅಕ್ಷರ ಗಾತ್ರ

ಕಲಬುರಗಿ: ರಾಜ್ಯ ಸರ್ಕಾರದ ಪುಣ್ಯಕೋಟಿ ದತ್ತು ಯೋಜನೆ ಸಾಕಾರಕ್ಕೆ ಜಿಲ್ಲೆಯ ಸರ್ಕಾರಿ ನೌಕರರು ₹ 1.17 ಕೋಟಿ ವಂತಿಗೆ ನೀಡುವ ಮೂಲಕ ಗೋಮಾತೆಯ ಸೇವೆಗೆ ಕೈಜೋಡಿಸಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಲೇಂಗಟಿ ತಿಳಿಸಿದ್ದಾರೆ.

‘ದೇಶದ‌ ಸಂಸ್ಕೃತಿ ಮತ್ತು ಸಂಪತ್ತಿನ‌ ಪ್ರತೀಕವಾಗಿರುವ ಗೋವುಗಳ ಸಂತತಿ ಸಂರಕ್ಷಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುಣ್ಯಕೋಟಿ ಯೋಜನೆ ಜಾರಿಗೆ ತಂದು, ಗೋವುಗಳ ದತ್ತು ಪಡೆಯಲು ರಾಜ್ಯದ ಸಮಸ್ತ ಜನತೆಗೆ ಕರೆ ನೀಡಿದರು. ಮುಖ್ಯಮಂತ್ರಿಗಳ ಕರೆಗೆ ಓಗೊಟ್ಟು ಜಿಲ್ಲೆಯ ಸಮಸ್ತ ಸರ್ಕಾರಿ ಅಧಿಕಾರಿಗಳು, ನೌಕರರು ಕಳೆದ ನವೆಂಬರ್ ಮತ್ತು ಡಿಸೆಂಬರ್ ತಿಂಗಳ ವೇತನದಿಂದ ನಿರ್ದಿಷ್ಟ ಮೊತ್ತ ಕಡಿತ ಮಾಡಿದ್ದು, ಒಟ್ಟಾರೆ ₹ 1,17,73,400 ವಂತಿಗೆ‌ ನೀಡುವ‌ ಮೂಲಕ ಯೋಜನೆಯ ಸುಗಮ‌ ಅನುಷ್ಟಾನಕ್ಕೆ ನೆರವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕಲಬುರಗಿ ತಾಲ್ಲೂಕಿನಲ್ಲಿ ₹ 49.61 ಲಕ್ಷ, ಆಳಂದ–₹ 12,09 ಲಕ್ಷ, ಜೇವರ್ಗಿ–₹ 10 ಲಕ್ಷ, ಚಿತ್ತಾಪೂರ₹ 9.27 ಲಕ್ಷ, ಸೇಡಂ–₹ 8.96 ಲಕ್ಷ, ಅಫಜಲಪುರ–8.68 ಲಕ್ಷ, ಚಿಂಚೋಳಿ–₹ 8.16 ಲಕ್ಷ, ಕಮಲಾಪುರ–₹ 3.49 ಲಕ್ಷ, ಕಾಳಗಿ–₹ 3.45 ಲಕ್ಷ, ಯಡ್ರಾಮಿ–₹ 2.18 ಲಕ್ಷ ಹಾಗೂ ಶಹಾಬಾದ್–₹ 1.80 ಲಕ್ಷ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT