ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಲಬರ್ಗಾ ವಿವಿ: ಮೊಬೈಲ್‌ನಲ್ಲೇ ಸೆಕ್ಸ್‌ ಮಾಡೋಣ ಎಂದು ಉಪನ್ಯಾಸಕ ಲೈಂಗಿಕ ಕಿರುಕುಳ!

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಆಡಿಯೊ
Published 7 ಜೂನ್ 2023, 15:47 IST
Last Updated 7 ಜೂನ್ 2023, 15:47 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ಅತಿಥಿ ಉಪನ್ಯಾಸಕರೊಬ್ಬರು ವಿದ್ಯಾರ್ಥಿನಿಗೆ ಕರೆ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಆಡಿಯೊದಲ್ಲಿ ವಿದ್ಯಾರ್ಥಿನಿ ಎಷ್ಟೇ ಬಾರಿ ‘ನೋ ಸರ್‌’ ಎಂದು ಹೇಳಿದರೂ ಬಿಡದ ಉಪನ್ಯಾಸಕ ಅಶ್ಲೀಲ ಪದಗಳನ್ನು ಬಳಸುತ್ತಾ, ಪತಿ–ಪತ್ನಿಯರ ಉದಾಹರಣೆ ನೀಡುತ್ತಾ ‘ಮನವಿ’ ಒಪ್ಪಿಕೊಳ್ಳುವಂತೆ ಪೀಡಿಸುತ್ತಾನೆ.

ಹರಿದಾಡಿರುವ ಆಡಿಯೊ...

ಉಪನ್ಯಾಸಕ: ಗರ್ಲ್‌ ಫ್ರೆಂಡ್‌ ಆಗು.

ವಿದ್ಯಾರ್ಥಿನಿ: ನೋ ಸರ್‌. ನಿಮ್ಮ ಮೇಲೆ ಅಂಥ ಭಾವನೆ ಇಲ್ಲ.

ಉಪನ್ಯಾಸಕ: ನನಗೆ ಇಂಟ್ರೆಸ್ಟ್‌ ಇದೆ. ನನ್ನ ರಿಕ್ವೆಸ್ಟ್‌ ಒಪ್ಪಿಕೊ.

ವಿದ್ಯಾರ್ಥಿನಿ: ನೀವು ಹೀಗೆ ಕೇಳುತ್ತೀರಿ ಎಂದರೆ ನನಗೆ ನಂಬಲು ಆಗುತ್ತಿಲ್ಲ ಸರ್‌.

ಉಪನ್ಯಾಸಕ: ನಾಳೆ ನೀನು ಬಾ. ಕಿಸ್‌ ಮಾಡಿ, ಹಗ್‌ ಮಾಡಿ ಕೇಳಿದರೆ ನಂಬ್ತಿ?

ಹೀಗೆ 23 ನಿಮಿಷ 49 ಸೆಕೆಂಡ್‌ ಸಂಭಾಷಣೆ ನಡೆಯುವ ಆಡಿಯೊದಲ್ಲಿ ವಿದ್ಯಾರ್ಥಿನಿಗೆ ಕೊನೆಗೆ ‘ಮೊಬೈಲ್‌ನಲ್ಲೇ ಸೆಕ್ಸ್‌ ಮಾಡೋಣ’ ಎಂದು ಉಪನ್ಯಾಸಕ ಪೀಡಿಸುತ್ತಾನೆ. ಮುಂದುವರೆದು ‘ವಿದ್ಯಾರ್ಥಿಗಳ ಮೇಲೆ ಕ್ರಷ್‌ ಆಗಬಾರದಾ? ಎಂದು ಕೇಳುತ್ತಾನೆ. ಆಗಲೂ ನಯವಾಗಿ ತಿರಸ್ಕರಿಸಿ ‘ನೀವು ನಮಗೆ ಸರಿಯಾಗಿ ಗೈಡ್‌ ಮಾಡಬೇಕು. ಒಳ್ಳೆಯ ಮಾರ್ಗದರ್ಶನ ನೀಡಬೇಕು. ನೀವು ಏನಾದರೂ ಮಾಡಿದರೆ ನಿಮ್ಮ ಮೇಲೆ ಇಟ್ಟಿರುವ ನಂಬಿಕೆ ಕಳೆದುಕೊಳ್ಳುತ್ತೀರಿ’ ಎನ್ನುವ ವಿದ್ಯಾರ್ಥಿನಿಯು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವನ್ನು ಮನವರಿಕೆ ಮಾಡಲು ಪ್ರಯತ್ನಿಸುತ್ತಾರೆ.

ಆಡಿಯೊ ಬಗ್ಗೆ ಪ್ರತಿಕ್ರಿಯಿಸಿದ ಗುಲಬರ್ಗಾ ವಿ.ವಿ ಹಂಗಾಮಿ ಕುಲಪತಿ ಪ್ರೊ. ವಿ.ಟಿ. ಕಾಂಬಳೆ, ‘ಆಡಿಯೊ ಕುರಿತು ಗಮನಕ್ಕೆ ಬರುತ್ತಿದ್ದಂತೆ ಎಂಬಿಎ ವಿಭಾಗದ ಮುಖ್ಯಸ್ಥರಿಗೆ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಲಾಗಿದೆ. ವಿಭಾಗದ ಮುಖ್ಯಸ್ಥರು ಹೊಸದಾಗಿ ಬಂದಿದ್ದು, ಅವರಿಗೂ ಯಾವುದೇ ಮಾಹಿತಿ ಇಲ್ಲ. ಆಡಿಯೊ ಎಲ್ಲಿ, ಯಾವಾಗ ನಡೆದಿದೆ ಎಂಬ ಬಗ್ಗೆ ಪರಿಶೀಲಿಸಲು ತಿಳಿಸಲಾಗಿದೆ. ವರದಿ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT