ಬುಧವಾರ, ಅಕ್ಟೋಬರ್ 21, 2020
24 °C

ಜಿಲ್ಲೆಯಾದ್ಯಂತ ‌ಭಾರಿ ಮಳೆ; ಕೆಲವೆಡೆ ಸಂಚಾರ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ವಾಯುಭಾರ ಕುಸಿತದಿಂದಾಗಿ ಜಿಲ್ಲೆಯಲ್ಲಿ ‌ಸತತ ಮೂರನೇ ದಿನವಾದ ‌ಸೋಮವಾರ ಭಾರಿ ಮಳೆ ಸುರಿದಿದೆ.

ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಊರುಗಳನ್ನು ಸಂಪರ್ಕಿಸುವ ಸೇತುವೆಗಳ ಮೇಲೆ  ಹಳ್ಳಗಳು ಉಕ್ಕಿ ಹರಿಯುತ್ತಿವೆ‌.

ಕಲಬುರ್ಗಿ ನಗರ, ಚಿಂಚೋಳಿ, ಕಾಳಗಿ, ಕಮಲಾಪುರ, ಚಿತ್ತಾಪುರ, ಸೇಡಂ ಹಾಗೂ ಜೇವರ್ಗಿ ತಾಲ್ಲೂಕಿನ ಹಲವೆಡೆ ಮಳೆಯ ಅರ್ಭಟ ಮುಂದುವರೆದಿದೆ. 

ಕಾಳಗಿ ತಾಲ್ಲೂಕಿನ ಕೋರವಾರ ಗ್ರಾಮದ ಬಳಿ ಸೇತುವೆ ತುಂಬಿ ಹರಿಯುತ್ತಿದ್ದು ಸಾರಿಗೆ ಸಂಸ್ಥೆ ಬಸ್ ಸೇರಿದಂತೆ ಹಲವು ವಾಹನಗಳು ‌ಸೇತುವೆ ದಡದಲ್ಲಿ ‌ನಿಂತಿವೆ.

ಕಮಲಾಪುರದ ಮರಗುತ್ತಿ ತಾಂಡಾದ ಬೆಟ್ಟದ ಮೇಲೆ ಸೀತಾಫಲ ಹಣ್ಣು ತರಲು ಹೋಗಿದ್ದ ಶಾಂತಾಬಾಯಿ ಹೋಬು ರಾಡೋಡ (40) ಹಳ್ಳ ದಾಟುವ ಪ್ರಯತ್ನದಲ್ಲಿದ್ದಾಗ ರಭಸಕ್ಕೆ ‌ಕೊಚ್ಚಿಕೊಂಡು ಹೋಗಿದ್ದು, ಅರ್ಧ ಕಿ.ಮೀ. ದೂರದಲ್ಲಿ ಅವರ ಶವ ಮರದ ಮೇಲೆ ಸಿಲುಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು