ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

45 ಕಾಲೇಜುಗಳಲ್ಲಿ 4 ಹೊಸ ಕೋರ್ಸ್‌: ಸಚಿವ ಸುಧಾಕರ್

Published : 12 ಆಗಸ್ಟ್ 2024, 16:05 IST
Last Updated : 12 ಆಗಸ್ಟ್ 2024, 16:05 IST
ಫಾಲೋ ಮಾಡಿ
Comments

ಕಲಬುರಗಿ: ‘ಯುವಕರಲ್ಲಿ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಜ್ಞಾನದ ಕೌಶಲ ವೃದ್ಧಿಗಾಗಿ ರಾಜ್ಯದ 45 ಕಾಲೇಜುಗಳಲ್ಲಿ ನಾಲ್ಕು ಹೊಸ ಕೋರ್ಸ್‌ಗಳು ಪ್ರಸಕ್ತ ವರ್ಷದಿಂದ ಆರಂಭವಾಗಲಿದ್ದು, 1,500 ವಿದ್ಯಾರ್ಥಿಗಳಿಗೆ ಪ್ರವೇಶ ಸಿಗಲಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರದ ಸ್ಕಿಲ್‌ ಸೆಕ್ಟರ್ ಕೌನ್ಸಿಲ್‌ ಅಡಿ ಬಿ.ಕಾಂ ಇನ್‌ ಲಾಜಿಸ್ಟಿಕ್, ಬಿ.ಕಾಂ ಇನ್‌ ಇ–ಕಾಮರ್ಸ್, ಬಿ.ಕಾಂ ಇನ್ ರಿಟೇಲ್‌ ಹಾಗೂ ಬ್ಯಾಂಕಿಂಗ್ ಆ್ಯಂಡ್ ಫೈನಾನ್ಸ್ ಕೋರ್ಸ್‌ಗಳು ಶುರುವಾಗಲಿವೆ. ಎರಡು ವರ್ಷ ಸೈದ್ಧಾಂತಿಕ ಹಾಗೂ ಕೊನೆಯ ವರ್ಷ ಸ್ಟೈಫಂಡ್‌ ಸಹಿತ ಇಂಟರ್ನ್‌ಶಿಪ್ ಇರಲಿದೆ. ಇದಕ್ಕಾಗಿ ಸ್ಕಿಲ್‌ ಸೆಕ್ಟರ್ ಕೌನ್ಸಿಲ್‌ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದರು.

‘ಸಮಸ್ಯೆಗಳಿಂದ ಬಳಲುತ್ತಿರುವ ವಿಶ್ವವಿದ್ಯಾಯಗಳನ್ನು ಹೊರತರಲು ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆಗೆ ತಿದ್ದುಪಡಿ ತರಲಾಗುವುದು. ಏಕಕಾಲದಲ್ಲಿ ಪರೀಕ್ಷೆ, ವಿಶ್ವವಿದ್ಯಾಲಯಗಳ ಬೆಳವಣಿಗೆಯಲ್ಲಿ ಕುಲಪತಿಗಳ ಹೊಣೆಗಾರಿಕೆ ಮತ್ತು ಅವರಿಗೆ ಸಹಾಯಕರ ನಿಯೋಜನೆ, ಸಿಂಡಿಕೇಟ್‌ ಸದಸ್ಯರ ನೇಮಕಕ್ಕೆ ಶೈಕ್ಷಣಿಕ ಅರ್ಹತೆ, ಸ್ಥಳೀಯ ವಿಚಾರಣೆ ಸಮಿತಿಯಲ್ಲಿ ಸಿಂಡಿಕೇಟ್‌ ಸದಸ್ಯರ ಪಾಲ್ಗೊಳ್ಳುವಿಕೆಯಂತಹ ವಿಷಯಗಳು ಒಳಗೊಂಡಿರಲಿವೆ. ಮುಂದಿನ ಅಧಿವೇಶನದಲ್ಲಿ ಕಾಯ್ದೆಯನ್ನು ಮಂಡಿಸುವ ಚಿಂತನೆ ಇದೆ’ ಎಂದರು.

‘ವಿಶ್ವವಿದ್ಯಾಲಯಗಳ ಲೆಕ್ಕ ಪರಿಶೋಧನೆ (ಆಡಿಟ್) ಮಾಹಿತಿಯು ಸರ್ಕಾರದ ಗಮನಕ್ಕೆ ಬರುತ್ತಿಲ್ಲ. ಹೀಗಾಗಿ, ವಿವಿಗಳ ಆಡಳಿತದಲ್ಲಿ ಪಾರದರ್ಶಕತೆ ತರಲು ಪ್ರತಿ ವರ್ಷ ಆಡಿಟ್ ಮಾಡಿಸಿ, ವರದಿಯನ್ನು ತರಿಸಿಕೊಳ್ಳಲಾಗುವುದು’ ಎಂದು ಹೇಳಿದರು.

‘ಇತ್ತೀಚಿನ ದಿನಗಳಲ್ಲಿ ಕಾಲೇಜು ಆರಂಭಿಸಿದಂತೆ ವಿಶ್ವವಿದ್ಯಾಲಯಗಳನ್ನೂ ಆರಂಭಿಸಲಾಗುತ್ತಿದೆ. ಇದರಿಂದ ವಿಶ್ವವಿದ್ಯಾಲಯಗಳ ಆರ್ಥಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ನಾವೇ ಅಡ್ಡಿ ಮಾಡಿದಂತೆ ಆಗುತ್ತಿದೆ. ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಗಳಲ್ಲಿ ಖ್ಯಾತಿಗಳಿಸಿದ ವಿಶ್ವವಿದ್ಯಾಲಯಗಳ ಮಟ್ಟಕ್ಕೆ ಒಯ್ಯಲು ಬಹಳಷ್ಟು ಸಮಯ ಮತ್ತು ಸಂಪತ್ತು ಬೇಡುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT