ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸೆಳೆದ ಹಿಂದೂಸ್ತಾನಿ ಸಂಗೀತ

Last Updated 21 ಡಿಸೆಂಬರ್ 2021, 16:23 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಸ್ವರ ಗಂಧರ್ವ ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಸಂಸ್ಥೆಯ ವತಿಯಿಂದದತ್ತ ಜಯಂತಿ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಹಿಂದುಸ್ತಾನಿ ಸಂಗೀತ ಕಾರ್ಯಕ್ರಮ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಹಿಂದೂಸ್ತಾನಿ ಗಾಯಕ, ಶಿರಸಿಯ ಪಂಡಿತ ವಿನಾಯಕ ಹೆಗಡೆ ಅವರ ಕಂಚಿನ ಕಂಠದಿಂದ ತೇಲಿಬಂದ ಗಾಯನ ಪ್ರೇಕ್ಷಕರನ್ನು ರಂಜಿಸಿತು. ‘ಮಾಝೆ ಮಹೇರಾ ಪಂಢರಿ’ ಹಾಗೂ ‘ಉತ್ತಮರ ಸಂಗ ಎನಗಿತ್ತು ಸಲಹೋ...’ ಎಂಬ ಹಾಡುಗಳಂತೂ ‍ಪ್ರೇಕ್ಷಕರನ್ನು ಹಿಡಿದಿಟ್ಟವು.

ನಿಖಿಲ್ ಕೊಲ್ಹಾರಕರ್, ವಿಜಯೇಂದ್ರ ಸಗರ ಅವರ ತಬಲಾ ಸಾಥ್, ಸುಧೀಂದ್ರ ಕುಲಕರ್ಣಿ ಅವರತಾಳ, ಬದರಿನಾಥ್ ಮುಡಬಿ ಅವರಸಂವಾದಿನಿ, ಅಭಿಷೇಕ ಜೋಶಿ ಅವರ ತಾನ್ಪರ ಸಾಥ್‌ ಮೋಡಿ ಮಾಡಿತು.

ಇದಕ್ಕೂ ಮುನ್ನ ಡಾ.ಗುರುರಾಜ ಶೇಷಗಿರಿ ದಂಡಾಪೂರ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಮಾಧವ್ ಜೋಶಿ ಹಾಗೂ ಪ್ರಭಂಜನ ಅನಗರಕರ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸಂಸ್ಥೆಯ ಅಧ್ಯಕ್ಷೆ ಸರೋಜಾ ಅನಗರಕರ್ ಅಧ್ಯಕ್ಷತೆ ವಹಿಸಿದ್ದರು. ಅಂಜನಾ ಕುಲಕರ್ಣಿ ನಿರೂಪಿಸಿದರು. ಅನನ್ಯ ಅನಗರಕರ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT