ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಡೆ ಓಡಾಡುತ್ತಿರುವ ಹೊಂ ಕ್ವಾರಂಟೈನಿಗಳು

ವಾಡಿ: ಹಲವು ಗ್ರಾಮ, ತಾಂಡಾಗಳಲ್ಲಿ ಸೋಂಕು ಭೀತಿ
Last Updated 3 ಜೂನ್ 2020, 10:05 IST
ಅಕ್ಷರ ಗಾತ್ರ

ವಾಡಿ (ಕಲಬುರ್ಗಿ): 14 ದಿನಗಳ ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ ಕಾರ್ಮಿಕರು, ಈಗ ಹೊಂ ಕ್ವಾರಂಟೈನ್ ನಿಯಮ ಧಿಕ್ಕರಿಸಿ ಎಲ್ಲೆಡೆ ಒಡಾಡುತ್ತಿದ್ದಾರೆ. ಇದರಿಂದ ಗ್ರಾಮ ಹಾಗೂ ತಾಂಡಾಗಳಲ್ಲಿ ಆತಂಕ ಮನೆ ಮಾಡಿದೆ.

ಸೋಂಕಿತರ ಸಂಪರ್ಕಕ್ಕೆ ಬಂದಿರುವ ಮುಂಬೈನಿಂದ ಮರಳಿದ ನಾಲವಾರ ವಲಯದ ವಿವಿಧ ತಾಂಡಾಗಳ ಸುಮಾರು 2,800 ಜನರಿಗೆ ತಾಲ್ಲೂಕು ಆಡಳಿತ ಹೊಂ ಕ್ವಾರಂಟೈನ್ ನಿಯಮ ಪಾಲಿಸುವಂತೆ ಸೂಚಿಸಿ, ಮನೆಗೆ ಕಳುಹಿಸಿದೆ. ಆದರೆ, ನಿಯಮ ಪಾಲಿಸದವರ ಮೇಲೆ ನಿಗಾ ವಹಿಸುತ್ತಿಲ್ಲ.

ವರದಿ ಬರುವುದಕ್ಕೂ ಮೊದಲೇ ಕ್ವಾರಂಟೈನ್‌ ಕೇಂದ್ರಗಳಿಂದ ಮನೆ ಸೇರಿಕೊಂಡಿದ್ದ ಹಲವರಲ್ಲಿ, ನಂತರ ಪಾಸಿಟಿವ್ ಬಂದಿದೆ. ಅವರೆಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಮೂರು ದಿನ ಅವರು ಸ್ಥಳೀಯರೊಂದಿಗೆ ಮುಕ್ತವಾಗಿ ಬೆರೆತಿದ್ದಾರೆ. ತಮ್ಮ ಗ್ರಾಮ ಸೇರಿರುವ ಹಲವರ ವರದಿ ಇನ್ನೂ ಬಂದಿಲ್ಲ. ಅವರೆಲ್ಲರೂ ತಾಂಡಾಗಳಲ್ಲೇ ಉಳಿದುಕೊಂಡಿದ್ದಾರೆ. ಹೀಗಾಗಿ ಸೋಂಕು ಇಡೀ ಸಮುದಾಯಕ್ಕೆ ಹಬ್ಬುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ. ನಿಯಮ ಪಾಲಿಸದವರ ಮೇಲೆ ಪ್ರಕರಣ ದಾಖಲಿಸಿ ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದರೂ, ಅದು ಕಾರ್ಯರೂಪಕ್ಕೆ ಬರುತ್ತಿಲ್ಲ. ಇಂತಹ ಗಂಭೀರ ವಿಷಯದ ಬಗ್ಗೆ ಆಡಳಿತ ನಿರ್ಲಕ್ಷ್ಯ ತೋರುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪ.

ಚಾಜುನಾಯಕ ತಾಂಡಾ, ದೇವಾಪೂರ, ರಾಮನಾಯಕ ತಾಂಡಾ, ಜೈರಾಂ ತಾಂಡಾ, ವಾಚುನಾಯಕ ತಾಂಡಾ, ಯಾಗಾಪುರ ತಾಂಡಾಗಳ ಕ್ವಾರಂಟೈನ್‌ಗೆ ಒಳಪಟ್ಟ ಸುಮಾರು 50 ಜನರಲ್ಲಿ ಕೋವಿಡ್ ದೃಢಪಟ್ಟಿದೆ. ತಾಂಡಾ ನಿವಾಸಿಗಳು ತಮ್ಮ ನಿತ್ಯದ ಅವಶ್ಯಕತೆಗಳಿಗಾಗಿ ಪಟ್ಟಣ ಸೇರಿದಂತೆ ಲಾಡ್ಲಾಪುರ, ಹಲಕರ್ಟಿ, ಹಣ್ಣಿಕೇರಾ, ನಾಲವಾರ, ಕುಂಬಾರಹಳ್ಳಿ ಗ್ರಾಮಗಳಲ್ಲಿ ಓಡಾಡುತ್ತಿರುವುದರಿಂದ ಅ ಗ್ರಾಮಗಳಲ್ಲಿಯೂ ಆತಂಕ ಇಮ್ಮಡಿಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT