ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲ-ಜಾತಿಗಿಂತಹ ಮಾನವೀಯತೆ ಶ್ರೇಷ್ಠ: ಸಿದ್ದಯೋಗಿ ಅಮರೇಶ್ವರ

ಕೆರೂರ:ಬೀರಲಿಂಗೇಶ್ವರ ನೂತನ ಶಿಖರಕ್ಕೆ ಕಳಸಾರೋಹಣ
Published 23 ಏಪ್ರಿಲ್ 2024, 4:31 IST
Last Updated 23 ಏಪ್ರಿಲ್ 2024, 4:31 IST
ಅಕ್ಷರ ಗಾತ್ರ

ಆಳಂದ: ‘ಕುಲ ಮತ್ತು ಧರ್ಮಗಳ ಪ್ರತಿಷ್ಠೆಗಿಂತಹ ಮಾನವೀಯತೆಯು ಶ್ರೇಷ್ಠವಾದದ್ದು, ಎಲ್ಲ ಮಹಾತ್ಮರು ಮಾನವೀಯತೆಯನ್ನೇ ಬೋಧಿಸಿದ್ದಾರೆ ಎಂದು ಹಣಮಾಪುರದ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಹೇಳಿದರು.

ತಾಲ್ಲೂಕಿನ ಕೆರೂರ ಗ್ರಾಮದಲ್ಲಿ ಸೋಮವಾರ ಬೀರಲಿಂಗೇಶ್ವರ ಗದ್ದುಗೆ ಪ್ರಾಣ ಪ್ರತಿಷ್ಠಾಪನೆ ಮತ್ತು ನೂತನ ಗರ್ಭಗುಡಿಯ ಶಿಖರಕ್ಕೆ ಕಳಸಾರೋಹಣ ಕಾರ್ಯಕ್ರಮದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

‘ಗಾಳಿಗೆ ನೀರಿಗೆ ಬೆಂಕಿಗೆ ಜಾತಿ ಇಲ್ಲ. ಎಲ್ಲರನ್ನು ಒಂದುಗೂಡಿಸಿಕೊಂಡು ಹೋಗುವ ಸಿದ್ಧಾಂತ ಹಾಲುಮತದವರು ಬೆಳೆಸಿಕೊಳ್ಳಬೇಕು. ಜಾತಿಗಿಂತ ನೀತಿ ಮುಖ್ಯ’ ಎಂದು ಹೇಳಿದರು.

ಸಾನ್ನಿಧ್ಯವಹಿಸಿದ ಮಾದನಹಿಪ್ಪರಗಿಯ ಶಿವಲಿಂಗೇಶ್ವರ ವಿರಕ್ತ ಮಠದ ಅಭಿನವ ಶಿವಲಿಂಗ ಸ್ವಾಮೀಜಿ ಮಾತನಾಡಿ, ಎಲ್ಲ ಜಾತಿ ಜನಾಂಗದವರು ಕೂಡಿಕೊಂಡು ಬೀರಲಿಂಗೇಶ್ವರ ಮತ್ತು ಮಲ್ಲಿಕಾರ್ಜುನ ಜಾತ್ರೆಗಳಲ್ಲಿ ಎರಡು ದೇವರ ಪಲ್ಲಕ್ಕಿ ಮೆರಸುತ್ತಿರುವುದು ನೋಡಿದರೆ ಭಾವೈಕ್ಯತೆಯ ಸಂಕೇತವಾಗಿದೆ’ ಎಂದರು.

ಕಲಬುರಗಿ–ಬೀದರ್‌– ಯಾದಗಿರಿ ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ, ಮೈಂದರಗಿಯ ಸಂಗಯ್ಯ ಶಾಸ್ತ್ರಿ, ಹತ್ತಿಕಣಬಸ್ ಪ್ರಭುಶಾಂತಲಿಂಗ ಸ್ವಾಮೀಜಿ ಮಾತನಾಡಿದರು.

ವೇದಿಕೆಯ ಮೇಲೆ ಪ್ರವಚನಕಾರ ಅವ್ವಣ್ಣ ಗುರುಗಳು, ಸಮಾಜದ ಹಿರಿಯರಾದ ಬೀರಣ್ಣ ಪೂಜಾರಿ ಕಡಗಂಚಿ ಇದ್ದರು.

ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಿಂದ ಬೀರಲಿಂಗೇಶ್ವರ ದೇವಸ್ಥಾನದವರೆಗೆ ಸಾಗಿ ಬಂದ ಶಿಖರದ ಕಳಸ ಮತ್ತು ಜೋಡಿ ಪಲ್ಲಕ್ಕಿ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಕುಂಬಕಳಸ ಹೊತ್ತು ಬಂದರು.

ಕಾರ್ಯಕ್ರಮದಲ್ಲಿ ನಾಗಣ್ಣ ಬ್ಯಾಗೆಳ್ಳಿ, ಶಿವಾನಂದ ನೀಲೂರೆ, ಕಲ್ಯಾಣಿ ಬ್ಯಾಗೆಳಿ, ರಾಹುಲ ಪಾಟೀಲ, ಬೀರಣ್ಣ ಅಚಲರಿ, ಹಣಮಂತ ವಾಡಿ, ಶಾಂತಮಲ್ಲ ಪೂಜಾರಿ, ನಿಂಗೇಶ್ ಪೂಜಾರಿ, ಬೀರಣ್ಣ ಕೆ.ಕಡಗಂಚಿ, ಕಾಶಿನಾಥ ವಾಡಿ ಗುಂಡಪ್ಪ ಉದ್ದನಶೆಟ್ಟಿ ಉಪಸ್ಥಿತರಿದ್ದರು.

ಬಸವರಾಜ ಪ್ಯಾಟಿ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT