ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 31ರಿಂದ ಇಂಚಗೇರಿ ಮಠದ ದಿಂಡಿ ಪಾದಯಾತ್ರೆ

Last Updated 30 ಮೇ 2022, 8:06 IST
ಅಕ್ಷರ ಗಾತ್ರ

ಕಲಬುರಗಿ: ಸದ್ಗುರು ಸಮರ್ಥ ಮಾಧವಾನಂದ ಪ್ರಭು ಅವರ 42ನೇ ಪುಣ್ಯತಿಥಿ ಸಪ್ತಾಹದ ಪ್ರಯುಕ್ತ ಇಲ್ಲಿನ ಇಂಚಗೇರಿ ಶಾಖಾ ಮಠವು ಚಡಚಣ ತಾಲ್ಲೂಕಿನ ಶ್ರೀಕ್ಷೇತ್ರ ಇಂಚಗೇರಿ ಮಠದವರೆಗೆ ಮಂಗಳವಾರ (ಮೇ 31) ದಿಂಡಿ ಪಲ್ಲಕ್ಕಿ ಪಾದಯಾತ್ರೆ ಹಮ್ಮಿಕೊಂಡಿದೆ.

ಭಜನಾ ಕಾರ್ಯಕ್ರಮದ ಬಳಿಕ ಮಠದ ಆವರಣದಿಂದ ಮಧ್ಯಾಹ್ನ 12ರ ಸುಮಾರಿಗೆ ಹೊರಡಲಿರುವ ಪಾದಯಾತ್ರೆಯು ಸಿರನೂರಿನಲ್ಲಿ ವಾಸ್ತವ್ಯ ಮಾಡಲಿದೆ. ನಂತರದ ದಿನಗಳಲ್ಲಿ ಸರಡಗಿ (ಬಿ), ಗೌನಳ್ಳಿ, ಹರವಾಳ, ಸೊನ್ನ, ಮಂದೇವಾಲ, ಹಂಚನಾಳ, ಗಬಸಾವಳಗಿ, ಸಿಂದಗಿ, ಬಂದಾಳಕ್ರಾಸ್, ದೇವರ ಹಿಪ್ಪರಗಿ, ಶಿವಣಗಿ, ಕೌಲಗಿ, ಮಹಲ್ ಅಲ್ಲಾಪುರ ತಾಂಡಾ, ವಿಜಯಪುರ, ಇಂಚಗೇರಿ ತಾಂಡಾ ಮೂಲಕ ಸಾಗಿ ಜೂನ್ 8ರಂದು ಇಂಚಗೇರಿ ಮಠ ತಲುಪಲಿದೆ.

ಇಂಚಗೇರಿ ಮಠದಿಂದ ಪುನಃ ಜೂನ್ 11ರಂದು ಹೊರಟು ಇಂಡಿ, ಸಾಲೋಟಗಿ, ನಾದ, ಅಲಮೇಲ, ಬಮ್ಮನಹಳ್ಳಿ, ದೇವಣಗಾಂವ, ಅಫಜಲಪುರ, ಚೌಡಾಪುರ, ಗೊಬ್ಬೂರ ಮೂಲಕ ಸಾಗಿ ಜೂನ್ 15ರಂದು ಕಲಬುರಗಿಗೆ ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT