ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2017ರಲ್ಲಿ ಜಿಲ್ಲೆಯ ತೊಗರಿಗೆ ಜಿಐ ಟ್ಯಾಗ್ ಬಂದಿದೆ. ಇತರೆಡೆ ಬೆಳೆಯುವ ತೊಗರಿಗಿಂತ ಜಿಲ್ಲೆಯಲ್ಲಿ ಬೆಳೆಯುವ ತೊಗರಿ ಉತ್ಕೃಷ್ಟವಾಗಿದ್ದು, ಹೆಚ್ಚು ಪೋಷಕಾಂಶಗಳು ಹೊಂದಿದೆ. ಈಗಾಗಲೇ ತೊಗರಿ ಮಾರಾಟಕ್ಕೆ ಜಿಲ್ಲೆಯಾದ್ಯಂತ 14 ರೈತ ಉತ್ಪಾದಕ ಕಂಪನಿಗಳು ನೋಂದಣಿಯಾಗಿವೆ’ ಎಂದರು.