ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಗುರಿ ಸಾಧನೆಯ ಆತ್ಮವಿಮರ್ಶೆ ಅಗತ್ಯ: ಡಾ. ಎಚ್.ಬಿ.ಪ್ರಭಾಕರ ಶಾಸ್ತ್ರಿ

Last Updated 15 ಆಗಸ್ಟ್ 2022, 16:54 IST
ಅಕ್ಷರ ಗಾತ್ರ

ಕಲಬುರಗಿ: ನಾವು ಬಯಸಿದಂತಹ ಸ್ವಾತಂತ್ರ್ಯ, ಸಂವಿಧಾನದ ಗುರಿಗಳನ್ನು ಸಾಧಿಸುವಲ್ಲಿ ನಾವು ಸಫಲರಾಗಿದ್ದೇವೆಯೇ ಎಂಬುದರ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಕಲಬುರಗಿ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಡಾ. ಎಚ್.ಬಿ. ಪ್ರಭಾಕರ ಶಾಸ್ತ್ರಿ ಹೇಳಿದರು.

ಕಲಬುರಗಿಯ ಹೈಕೋರ್ಟ್ ಪೀಠದಲ್ಲಿ ಸೋಮವಾರ ಸ್ವಾತಂತ್ರ್ಯದ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಭಾರತ 75 ವರ್ಷಗಳಲ್ಲಿ ವಿಶ್ವವೇ ಬೆರಗಿನಿಂದ ನೋಡುವಂತಹ ಸಾಧನೆ ಮಾಡಿದೆ. ಆದರೆ, ವಿಶಿಷ್ಟ ಸಂಸ್ಕೃತಿ, ಜನಜೀವನದ ಹಿನ್ನೆಲೆ ಹೊಂದಿರುವ ನಾವು, ನಮ್ಮ ಜೀವನದ ಮೌಲ್ಯಗಳಿಗೆ ಅನುಗುಣವಾಗಿ ನಾವು ಬಯಸಿದಂತಹ ಸ್ವಾತಂತ್ರ್ಯ ಪಡೆಯುವುದು ಬಾಕಿಯಿದೆ’ ಎಂದರು.

‘ಭಾರತ ಏನೇ ಸಾಧಿಸಿದರೂ ಬಡತನ, ಅನಕ್ಷರತೆ ಮತ್ತು ನಿರುದ್ಯೋಗ ಸಮಸ್ಯೆಯನ್ನು ಪೂರ್ಣವಾಗಿ ಮೆಟ್ಟಿನಿಲ್ಲಲು ಆಗುತ್ತಿಲ್ಲ. ಇವುಗಳ ನಿವಾರಣೆಗೆ ನಾವು ಶ್ರಮಿಸಬೇಕು. ಉತ್ತಮ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು’ ಎಂದರು.

ಹೈಕೋರ್ಟ್‌ನ ಹೆಚ್ಚುವರಿ ರಿಜಿಸ್ಟಾರ್ ಜನರಲ್ ಕೆ.ಎಸ್. ವಿಜಯ, ಹೆಚ್ಚುವರಿ ರಿಜಿಸ್ಟಾರ್ (ನ್ಯಾಯಾಂಗ) ದಯಾನಂದ ವಿ.ಹಿರೇಮಠ, ನಾಯ್ಯಮೂರ್ತಿಗಳಾದ ಎಚ್.ಟಿ ನರೇಂದ್ರ ಪ್ರಸಾದ್, ಪಿ.ಎನ್. ದೇಸಾಯಿ, ಎಂ.ಜಿ.ಎಸ್ ಕಮಲ್, ಸಿ.ಎಂ.ಪೂಣಚ್ಚ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT