ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಯೂಕಿ– ಸಾಕೇತ್‌ಗೆ ಪ್ರಶಸ್ತಿ

Last Updated 14 ಜನವರಿ 2023, 11:29 IST
ಅಕ್ಷರ ಗಾತ್ರ

ನೊಂತಬುರಿ, ಥಾಯ್ಲೆಂಡ್‌ (ಪಿಟಿಐ): ಭಾರತದ ಯೂಕಿ ಭಾಂಬ್ರಿ ಮತ್ತು ಸಾಕೇತ್‌ ಮೈನೇನಿ ಜೋಡಿ ಶನಿವಾರ ಇಲ್ಲಿ ಕೊನೆಗೊಂಡ ಬ್ಯಾಂಕಾಕ್‌ ಓಪನ್‌ ಎಟಿಪಿ ಚಾಲೆಂಜರ್‌ ಟೂರ್‌ ಟೆನಿಸ್‌ ಟೂರ್ನಿಯಲ್ಲಿ ಚಾಂಪಿಯನ್ ಆದರು.

ಅಗ್ರಶ್ರೇಯಾಂಕ ಪಡೆದಿದ್ದ ಭಾರತದ ಜೋಡಿ ಫೈನಲ್‌ನಲ್ಲಿ 2–6, 7–6, 14–12 ರಲ್ಲಿ ಇಂಡೊನೇಷ್ಯಾದ ಕ್ರಿಸ್ಟೋಫರ್‌ ರುಂಗ್‌ಕಟ್ ಹಾಗೂ ಆಸ್ಟ್ರೇಲಿಯಾದ ಅಕಿರ ಸಂಟಿಲನ್‌ ಎದುರು ಗೆದ್ದಿತು.

ಯೂಕಿ ಮತ್ತು ಸಾಕೇತ್‌ ಜೋಡಿ ಎಟಿಪಿ ಚಾಲೆಂಜರ್‌ ಟೂರ್‌ನಲ್ಲಿ ಜತೆಯಾಗಿ ಗೆದ್ದ ಆರನೇ ಪ್ರಶಸ್ತಿ ಇದು. ಫೈನಲ್‌ ಪಂದ್ಯ ಒಂದು ಗಂಟೆ 50 ನಿಮಿಷ ನಡೆಯಿತು.

ಇವರಿಬ್ಬರು ಕಳೆದ ವರ್ಷದಿಂದ ಜತೆಯಾಗಿ ಆಡುತ್ತಿದ್ದು, 2022ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗಿನ ಅವಧಿಯಲ್ಲಿ ಆರು ಚಾಲೆಂಜರ್ ಟೂರ್ನಿಗಳಲ್ಲಿ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದ್ದರು. ಐದರಲ್ಲಿ ಚಾಂಪಿಯನ್‌ ಆಗಿದ್ದರು.

ಈ ಗೆಲುವಿನ ಮೂಲಕ ಯೂಕಿ ಅವರು ಡಬಲ್ಸ್‌ ವಿಭಾಗದ ರ‍್ಯಾಂಕಿಂಗ್‌ನಲ್ಲಿ 90ನೇ ಸ್ಥಾನಕ್ಕೆ ಹಾಗೂ ಮೈನೇನಿ ಅವರು 74ನೇ ಸ್ಥಾನಕ್ಕೆ ಏರಲಿದ್ದಾರೆ.

ಯೂಕಿ ಮತ್ತು ಸಾಕೇತ್‌ ಅವರು ಋತುವಿನ ಮೊದಲ ಗ್ರ್ಯಾನ್‌ಸ್ಲಾಮ್‌ ಟೂರ್ನಿ ಆಸ್ಟ್ರೇಲಿಯಾ ಓಪನ್‌ನಲ್ಲಿ ಆಡಲಿದ್ದಾರೆ. ಭಾರತದ ಜೋಡಿ ಈ ಟೂರ್ನಿಗೆ ವೈಲ್ಡ್‌ಕಾರ್ಡ್‌ ಪ್ರವೇಶ ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT