ಭಾನುವಾರ, ಜನವರಿ 19, 2020
19 °C
₹10.97 ಕೋಟಿ ವೆಚ್ಚದ ಕಾಮಗಾರಿಗೆ ಅಡಿಗಲ್ಲು

ದೇಶದ ವ್ಯವಸ್ಥೆ ಬಗ್ಗೆ ಬುದ್ಧಿಜೀವಿಗಳು ದ್ವನಿ ಎತ್ತಿ : ಪ್ರಿಯಾಂಕ್ ಖರ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ಯೋಜನೆಯಡಿ ₹10.97 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಪ್ರಿಯಾಂಕ್  ಖರ್ಗೆ ಬುಧವಾರ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಶಿಲಾನ್ಯಾಸ ನೆರವೇರಿಸಿದರು.

2018-19ನೇ ಸಾಲಿನ ಕೆ.ಎಚ್.ಎಸ್.ಡಿ.ಪಿ ಯೋಜನೆಯಡಿ ₹8 ಕೋಟಿ ವೆಚ್ಚದಲ್ಲಿ ಚಿತ್ತಾಪುರ- ಯಾದಗಿರ ರಸ್ತೆ ನಿರ್ಮಾಣ, 2019-20ನೇ ಸಾಲಿನ 14ನೇ ಹಣಕಾಸು ಯೋಜನೆಯಡಿ ₹2.47 ಕೋಟಿ ವೆಚ್ಚದಲ್ಲಿ ಸಿಮೆಂಟ್ ರಸ್ತೆ, ಚರಂಡಿ, ಪಾರ್ಕ್ ಅಭಿವೃದ್ಧಿ, ಕುಡಿಯುವ ನೀರಿನ ಕಾಮಗಾರಿ, 2019-20ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆ ಯೋಜನೆಯಡಿ ₹50 ಲಕ್ಷ ವೆಚ್ಚದಲ್ಲಿ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಸಿಮೆಂಟ್ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.

ಪ್ರಿಯಾಂಕ್‌ ಖರ್ಗೆ ಮಾತನಾಡಿ, ‘ದೇಶದಲ್ಲಿ ನಡೆಯುವ ಬೆಳವಣಿಗೆ ಕುರಿತು ಯಾವುದು ಸರಿ, ಯಾವುದು ತಪ್ಪು ಎಂದು ಸಾಹಿತಿಗಳು, ಪ್ರಗತಿಪರರು, ಬುದ್ಧಿಜೀವಿಗಳು ಧ್ವನಿ ಎತ್ತಬೇಕು. ಸಂವಿಧಾನ, ಕಾನೂನಿನ ಕಗ್ಗೊಲೆ ನಡೆದರೂ ಅವರೆಲ್ಲ ದ್ವನಿ ಎತ್ತದಿದ್ದರೆ ದೇಶದ ಪ್ರಜಾಪ್ರಭುತ್ವ ಮತ್ತು ಭವಿಷ್ಯ ಅತಂತ್ರಕ್ಕೆ ಸಿಲುಕುತ್ತದೆ’ ಎಂದರು.

ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಮಾತನಾಡಿ, ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ಬಿಜೆಪಿ ಶಾಸಕರೊಬ್ಬರು ನಮ್ಮೊಂದಿಗೆ ಮಾತನಾಡುವಾಗ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ ತಪ್ಪು ಮಾಡಿದೆವು. ಈ ಭಾಗದ ಅಭಿವೃದ್ಧಿಗಾಗಿ ಅವರು ಗೆಲ್ಲಬೇಕಿತ್ತು ಎನ್ನುವ ನೋವು ಹಂಚಿಕೊಂಡಿದ್ದಾರೆ’ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಿವಿಧ ಕ್ಷೇತ್ರದ ಸಾಧಕರಾದ ನಾಗಪ್ಪಯ್ಯ ಸ್ವಾಮಿ (ನಾಟಕ), ಕೃಷ್ಣಾರೆಡ್ಡಿ ಹಿರೆಡ್ಡಿ (ಶಿಕ್ಷಣ), ಕಾಂತಮ್ಮ ಹೂಗಾರ (ಕೃಷಿ), ದೇವಿಂದ್ರರೆಡ್ಡಿ ದುಗನೂರ (ಕ್ರೀಡೆ), ಕೆ.ಎಂ ವಿಶ್ವನಾಥ (ಸಾಹಿತ್ಯ), ನಟರಾಜ ಶಿಲ್ಪಿ (ಶಿಲ್ಪಕಲೆ) ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ನಾಡುನುಡಿ ಕುರಿತು ಕಿರಣಕುಮಾರ ಕುಮಸಿ ಮಾತನಾಡಿದರು. ಕಸಾಪ ಅಧ್ಯಕ್ಷ ಕಾಶಿನಾಥ ಗುತ್ತೆದಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಶಿವಾನಂದ ಪಾಟೀಲ್ ಮಾತಾನಾಡಿದರು.

ಮುಖ್ಯ ಅತಿಥಿಗಳಾಗಿ ಜಗದೇವರೆಡ್ಡಿ ಪಾಟೀಲ್, ಶಿವರುದ್ರ ಭೀಣಿ, ಹರಿನಾಥ ಚವಾಣ್, ಶಿವರೆಡ್ಡಿ ನಾಲವಾರ, ಭೀಮಣ್ಣ ಸಾಲಿ, ಅಜೀಜ್ ಶೇಠ್, ಶ್ರೀನಿವಾಸ ಸಗರ, ಬಸವರಾಜ ಬಳೂಂಡಗಿ, ನಾಗಯ್ಯ ಗುತ್ತೆದಾರ್, ಮುಕ್ತಾರ್ ಪಟೇಲ್, ಚಂದ್ರಶೇಖರ ಕಾಶಿ, ಪಾಶಾಮಿಯ್ಯ ಖುರೇಷಿ, ಮಲ್ಲಿಕಾರ್ಜುನ ಕಾಳಗಿ ಹಾಗೂ ಜಯಪ್ರಕಾಶ ಕಮಕನೂರ, ಮಲ್ಲಪ್ಪ ಹೊಸಮನಿ, ಈರಪ್ಪ ಭೋವಿ, ಶರಣು ಡೋಣಗಾಂವ, ಬಸವರಾಜ ಚಿನ್ನಮಳ್ಳಿ, ಶಿವಕಾಂತ ಬೆಣ್ಣೂರಕರ್, ರಾಮಲಿಂಗ ಬಾನರ, ಹಣಮಂತ ಸಂಕನೂರ, ಶಿವಣ್ಣ ಹಿಟ್ಟಿನ್ ಇದ್ದರು. ಸಿದ್ದಲಿಂಗ ಬಾಳಿ ನಿರೂಪಿಸಿ ವಂದಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು