ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

International Yoga Day | ಕಲಬುರಗಿಯಲ್ಲಿ ಯೋಗ ದಿನದ ಸಂಭ್ರಮ

Published 21 ಜೂನ್ 2024, 2:26 IST
Last Updated 21 ಜೂನ್ 2024, 2:26 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಯೋಗಾಭ್ಯಾಸದ ಸಂಭ್ರಮ ಮನೆ ಮಾಡಿತ್ತು.

ಆಗಷ್ಟೇ ಸೂರ್ಯ ಮೋಡಗಳ ಮಧ್ಯದಿಂದ ಮಿನುಗುತ್ತಿದ್ದ. ಮೋಡ ಕವಿದ ಆಹ್ಲಾದಕರ ವಾತಾವರಣದಲ್ಲಿ ನೂರಾರು ಜನರು ವಿವಿಧ ಆಸನಗಳನ್ನು ಮಾಡುವ ಮೂಲಕ 10ನೇ ಅಂತರರಾಷ್ಟ್ರೀಯ ಯೋಗ ದಿನ ಆಚರಣೆಯಲ್ಲಿ ಪಾಲ್ಗೊಂಡು ಆರೋಗ್ಯ ‌ಕಾಳಜಿ ಮೆರೆದರು.

ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ನಗರ ಪೊಲೀಸ್ ಕಮಿಷನರ್ ಚೇತನ್ ಆರ್, ಡಿಡಿಪಿಯು ಶಿವಶರಣಪ್ಪ ಮುಳೆಗಾಂವ, ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ, ಪಾಲಿಕೆ ಉಪ ಆಯುಕ್ತ ಮಾಧವ ಗಿತ್ತೆ ಸೇರಿದಂತೆ ವಿವಿಧ ಇಲಾಖೆಗಳ ಹಲವು ಅಧಿಕಾರಿಗಳು ಪಾಲ್ಗೊಂಡು ಹಲವು ಆಸನಗಳನ್ನು ಮಾಡಿದರು.

ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು, ವಸತಿ ಶಾಲೆಗಳ ಮಕ್ಕಳು, ಕ್ರೀಡಾಶಾಲೆಗಳ ವಿದ್ಯಾರ್ಥಿಗಳು, ಸಾಮಾನ್ಯ ಜನರೂ ಯೋಗ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು.

ಒಂದು ಗಂಟೆಯಷ್ಟು ಕಾಲ ನಡೆದ ಅಭ್ಯಾಸದಲ್ಲಿ ನಿಂತು ಮಾಡುವ, ಕುಳಿತು ಮಾಡುವ, ಮಲಗಿ‌ ಮಾಡುವ ವಿವಿಧ ಆಸನಗಳನ್ನು ‌ಅಭ್ಯಾಸ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT