ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೇವರ್ಗಿ | ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು

Published 17 ಜೂನ್ 2024, 5:37 IST
Last Updated 17 ಜೂನ್ 2024, 5:37 IST
ಅಕ್ಷರ ಗಾತ್ರ

ಜೇವರ್ಗಿ: ತಾಲ್ಲೂಕಿನ ನೆಲೋಗಿ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ‌

ಮೃತರನ್ನು ಹುಬ್ಬಳ್ಳಿಯ ಶಾಂತಯ್ಯ ಶಿವಾನಂದ ಮಠ (37) ಮತ್ತು ಯಾದಗಿರಿಯ ಲೋಕೇಶ ಬಸವರಾಜ ಹಾಸನ ಎಂದು ಗುರುತಿಸಲಾಗಿದೆ. ‌

ಮೃತಪಟ್ಟ ಹುಬ್ಬಳ್ಳಿಯ ಶಾಂತಯ್ಯ ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆಯ ಸಹಾಯಕರಾಗಿದ್ದರು. ಲೋಕೇಶ ಅವರು ಖಾಸಗಿಯಾಗಿ ಕಂಪ್ಯೂಟರ್ ಆಪರೇಟರ್‌ ಆಗಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಯಾದಗಿರಿಯಿಂದ ವಿಜಯಪುರಕ್ಕೆ ತೆರಳುತ್ತಿದ್ದಾಗ ಘಟನೆ ನಡೆದಿದೆ.

ಎಎಸ್‌ಪಿ ಬಿಂದುರಾಣಿ, ಸಿಪಿಐ ರಾಜಾಸಾಬ್ ನದಾಫ್, ನೆಲೋಗಿ ಪಿಎಸ್‌ಐ ಗಜಾನನ ಬಿರಾದಾರ, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ಧಾರೆ. ನೆಲೋಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT