ಜೇವರ್ಗಿ: ಕರ್ತವ್ಯ ಲೋಪ ಆರೋಪದ ಮೇಲೆ ಪ್ರಭಾರ ಮುಖ್ಯಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ಯಡ್ರಾಮಿ ತಾಲ್ಲೂಕು ಮುತ್ತಕೋಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಶಿವಶಂಕರ ಅಮಾನತುಗೊಂಡವರು.

ಜೂನ್ 18 ರಂದು ಜಿಲ್ಲಾ ಎ.ಪಿ.ಎಫ್. ತಂಡದ ವತಿಯಿಂದ ಶಾಲೆಗೆ ಭೇಟಿ ನೀಡಲಾಗಿತ್ತು. ಈ ವೇಳೆ 2025-26 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭದಿಂದ ಮಕ್ಕಳಿಗೆ ಬಿಸಿ ಊಟದಲ್ಲಿ ಮೊಟ್ಟೆ, ಬಾಳೆಹಣ್ಣು ಹಾಗೂ 3–4 ದಿನ ಬಿಸಿ ಊಟ ವಿತರಿಸಿರುವುದಿಲ್ಲವೆಂದು ಶಾಲಾ ಮಕ್ಕಳು ತಿಳಿಸಿದರು. ಈ ಕುರಿತು ಅಡುಗೆ ಸಹಾಯಕರನ್ನು ವಿಚಾರಿಸಿದಾಗ, ಗ್ಯಾಸ್ ಖಾಲಿಯಾಗಿರುವುದರಿಂದ ಅಡುಗೆ ತಯಾರಿಸಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಕೆಲ ಮಕ್ಕಳು ಶಾಲೆಗೆ ಮನೆಯಿಂದ ಊಟ ಕಟ್ಟಿಕೊಂಡು ಬಂದಿರುವುದನ್ನು ಗಮನಿಸಲಾಯಿತು. ಅಲ್ಲದೇ ಕೆಲವು ಮಕ್ಕಳು ಊಟಕ್ಕೆ ಮನೆಗೆ ಹೋಗಿದ್ದರು.

ಬಿಸಿ ಊಟ ವಿತರಿಸಿದ ಕುರಿತು ದಾಖಲೆ ಕೂಡ ಬರೆಯದೇ ನಿರ್ಲಕ್ಷ್ಯ ವಹಿಸಲಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಶಿವಶಂಕರ ಕರ್ತವ್ಯ ಲೋಪ ಎಸಗಿರುವುದು ಸಾಬೀತಾದ ಹಿನ್ನಲೆಯಲ್ಲಿ ಶಿಸ್ತು ಕ್ರಮ ಜರುಗಿಸುವಂತೆ ತಪಾಸಣೆ ತಂಡದವರು ಶಿಫಾರಸು ಮಾಡಿದ್ದರು. ಹೀಗಾಗಿ ಪ್ರಭಾರ ಮುಖ್ಯಶಿಕ್ಷಕರ ಮೇಲೆ ಶಿಸ್ತುಕ್ರಮ ಜರುಗಿಸಿ ಅಮಾನತುಗೊಳಿಸಲಾಗಿದೆ ಎಂದು ಬಿಇಒ ವೀರಣ್ಣ ಬೊಮ್ಮನಳ್ಳಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.