ಗುರುವಾರ , ಅಕ್ಟೋಬರ್ 22, 2020
28 °C
ಅಧ್ಯಕ್ಷ ಸ್ಥಾನ– ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ–ಸಾಮಾನ್ಯ ವರ್ಗಕ್ಕೆ ಮೀಸಲು; ಹೆಚ್ಚಿದ ಪೈಪೋಟಿ

ಮೀಸಲು ಪ್ರಕಟವಾಗುತ್ತಲೇ ಜೇವರ್ಗಿ ಪುರಸಭೆಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

ವೆಂಕಟೇಶ ಆರ್.ಹರವಾಳ Updated:

ಅಕ್ಷರ ಗಾತ್ರ : | |

Prajavani

ಜೇವರ್ಗಿ:  ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾಗಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ. ರಾಜಕೀಯ ವಲಯದಲ್ಲಿನ ಬೆಳವಣಿಗೆ ಕುರಿತು ಸಾರ್ವಜನಿಕರಲ್ಲಿ ಚರ್ಚೆ ಆರಂಭಗೊಂಡಿದೆ.

ಜೇವರ್ಗಿ ಪುರಸಭೆಯ ಅಧ್ಯಕ್ಷ ಸ್ಥಾನ–ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ–ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. 23 ಸದಸ್ಯರ ಬಲ ಹೊಂದಿರುವ ಜೇವರ್ಗಿ ಪುರಸಭೆಯಲ್ಲಿ ಬಿಜೆಪಿಯ 17 ಸದಸ್ಯರಿದ್ದಾರೆ. ಕಾಂಗ್ರೆಸ್‌ನ ಮೂವರು, ಜೆಡಿಎಸ್‌ನ ಮೂವರು ಸದಸ್ಯರಿದ್ದಾರೆ.

ಚುನಾಯಿತರಾಗಿ ಎರಡು ವರ್ಷಗಳು ಆದರೂ ಅಧಿಕಾರ ಸಿಗದಿರುವ ಬಗ್ಗೆ ಸದಸ್ಯರಲ್ಲಿ ಬೇಸರವಿತ್ತು. ಮೀಸಲಾತಿ ಪಟ್ಟಿ ಬಿಡುಗಡೆಯಾದ ಬಳಿಕ ಅವರು ನಿರಾಳರಾಗಿದ್ದಾರೆ. ಪಟ್ಟಿಯಿಂದ ಕೆಲವರು ಹರ್ಷಗೊಂಡಿದ್ದರೆ, ಮೀಸಲಾತಿ ಕೈ ತಪ್ಪಿತು ಎಂದು ಕೆಲವರು ನಿರಾಸೆಗೊಂಡಿದ್ದಾರೆ.

ಒಟ್ಟಾರೆ ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸಲು ಪುರಸಭೆ ದ್ವಾರಬಾಗಿಲಾದರು ತೆಗೆಯಿತಲ್ಲ ಎಂಬ ನೆಮ್ಮದಿ ಕೆಲವು ಜನ ಪುರಸಭೆ ಸದಸ್ಯರಲ್ಲಿದೆ. ಮೀಸಲಾತಿಗೆ ಸಂಬಂಧಪಟ್ಟಂತೆ ಕೆಲವರು ನ್ಯಾಯಾಲಯದ ಕದ ತಟ್ಟಿದ್ದರಿಂದ 25 ತಿಂಗಳಿಂದ ಪುರಸಭೆ ಸದಸ್ಯರು ಅಧಿಕಾರದಿಂದ ವಂಚಿತಗೊಂಡಿದ್ದರು.

ಈಗ ಮೀಸಲಾತಿ ಪ್ರಕಟ ವಾಗಿದ್ದರಿಂದ ಪುರಸಭೆ ಪ್ರವೇಶಿಸಲು ಸದಸ್ಯರು ಕಾತುರರಾಗಿದ್ದಾರೆ. ಒಟ್ಟಾರೆ 23 ಸದಸ್ಯರ ಬಲ ಹೊಂದಿದ ಪುರಸಭೆಯಲ್ಲಿ ಬಿಜೆಪಿ ಪಕ್ಷ ನಿಚ್ಚಳ ಬಹುಮತ ಹೊಂದಿದೆ. ಬಿಜೆಪಿ 17 ಸ್ಥಾನಗಳನ್ನು, ಕಾಂಗ್ರೆಸ್ ಜೆಡಿಎಸ್ ತಲಾ 3 ಸ್ಥಾನಗಳನ್ನು ಹೊಂದಿದೆ.

ಪ್ರಸ್ತುತ ಮೀಸಲಾತಿ ಪಟ್ಟಿ ಅನ್ವಯ ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ಪುರಸಭೆ ವಾರ್ಡ ಸಂಖ್ಯೆ 23ರ ಬಿಜೆಪಿ ಸದಸ್ಯೆ ಕಸ್ತೂರಿಬಾಯಿ ಸಾಹೇಬಗೌಡ ಕಲ್ಲಾ ಅಧ್ಯಕ್ಷರಾಗುವ ಸಾಧ್ಯತೆ ಹೆಚ್ಚಿದೆ. ಅಧ್ಯಕ್ಷ ಸ್ಥಾನಕ್ಕೆ ಅಷ್ಟೊಂದು ಪೈಪೋಟಿ ಇಲ್ಲದಿದ್ದರು ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಪೈಪೋಟಿ ನಡೆಯುವ ಸಾಧ್ಯತೆ ದಟ್ಟವಾಗಿದೆ. ಆದರೂ ಬಿಜೆಪಿ ಮುಖಂಡರ ತೀರ್ಮಾನದ ನಂತರವೇ ಸ್ಪಷ್ಟ ಚಿತ್ರಣ ಸಿಗಲಿದೆ.

ಈ ಮುಂಚೆ ಪ್ರಕಟಿತ ಮೀಸಲಾತಿ ಅನ್ವಯ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು. ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್ಗಕ್ಕೆ ಮೀಸಲಾಗಿತ್ತು. ಹೊಸ ಮೀಸಲಾತಿ ಪಟ್ಟಿ ಪೈಪೋಟಿ ಹೆಚ್ಚಿಸಿದೆ.

‘ಮೀಸಲಾತಿ ಪಟ್ಟಿ ಬಿಡುಗಡೆಯಿಂದ ಪುರಸಭೆಗೆ ಅಧ್ಯಕ್ಷರ, ಉಪಾಧ್ಯಕ್ಷರ ಆಯ್ಕೆಯಾಗುತ್ತದೆ. ವಾರ್ಡ್‌ ಸದಸ್ಯರಿಗೆ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತೆ ಹೇಳಲು ಸಾಧ್ಯವಾಗುತ್ತದೆ’ ಎಂದು ಪಟ್ಟಣದ ಜನರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು