ಕೆ-ಸೆಟ್ ಪರೀಕ್ಷೆ 30ರಂದು

7

ಕೆ-ಸೆಟ್ ಪರೀಕ್ಷೆ 30ರಂದು

Published:
Updated:

ಕಲಬುರ್ಗಿ: ಮೈಸೂರು ವಿಶ್ವವಿದ್ಯಾಲಯ ನಡೆಸುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ( ಕೆ-ಸೆಟ್–2018)ಯು ಡಿ. 30ರಂದು ಜರುಗಲಿದೆ.

ಪರೀಕ್ಷೆಯ ಮೊದಲ ಅವಧಿ ಬೆಳಿಗ್ಗೆ 9.30ರಿಂದ 10.30ರವರೆಗೆ ಹಾಗೂ ಎರಡನೇ ಅವಧಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಇದೆ.

ಗುಲಬರ್ಗಾ ವಿಶ್ವವಿದ್ಯಾಲಯವನ್ನು ಪರೀಕ್ಷಾ ಕೇಂದ್ರವಾಗಿ ಆಯ್ಕೆ ಮಾಡಿಕೊಂಡ 10,284 ವಿದ್ಯಾರ್ಥಿಗಳಿಗೆ ಗುಲಬರ್ಗಾ ನಗರದ 11 ಉಪ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.

ಈ ಬಗ್ಗೆ ಖಚಿತಪಡಿಸಿಕೊಳ್ಳಲು ಡಿ.15ರ ನಂತರ ಮೈಸೂರು ವಿಶ್ವವಿದ್ಯಾಲಯದ ವೆಬ್‌ಸೈಟ್‌ kset.uni-mysore.ac.in ಅಥವಾ ಗುಲಬರ್ಗಾ ವಿಶ್ವವಿದ್ಯಾಲಯದ ವೆಬ್‌ಸೈಟ್‌ gug.ac.in ಸಂಪರ್ಕಿಸುವಂತೆ ನೋಡಲ್ ಅಧಿಕಾರಿ ಪ್ರೊ.ಕೆ. ಸಿದ್ದಪ್ಪ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !