ಗುರುವಾರ , ಮೇ 26, 2022
31 °C
ಈಡಿಗ ನಿಗಮ ಸ್ಥಾಪನೆ; ನೀರಾ ಇಳಿಸಿ ಮಾರಲು ಅನುಮತಿಗೆ ಒತ್ತಾಯ

ಈಡಿಗ ಸಮಾಜದ ಪಾದಯಾತ್ರೆ; ನೀರಾ ಇಳಿಸಿ ಮಾರಲು ಅನುಮತಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ (ಕಲಬುರಗಿ ಜಿಲ್ಲೆ): ಆರ್ಯ ಈಡಿಗ ಸಮುದಾಯದ ಕುಲಕಸುಬು ನೀರಾ ಇಳಿಸಿ ಮಾರಾಟ ಮಾಡಲು ಅನುಮತಿ ನೀಡಬೇಕು, ಆರ್ಯ ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಈಡಿಗ ರಾಷ್ಟ್ರೀಯ ಮಹಾಮಂಡಳಿ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ‌ ನೇತೃತ್ವದಲ್ಲಿ ಇಲ್ಲಿನ ಹಾರಕೂಡ ಚನ್ನಬಸವ ಶಿವಯೋಗಿಗಳ‌ ಮಠದಿಂದ ಕಲಬುರಗಿಯವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆ ಗುರುವಾರ ಆರಂಭಗೊಂಡಿತು.

ಪಾದಯಾತ್ರೆಗೆ ಚಾಲನೆ ನೀಡಿದ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ, ‘ಸಮಾಜದ ಬಂಧುವಾಗಿ ಇಲ್ಲಿಗೆ ಬಂದಿದ್ದು ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದೇನೆ. ಆರ್ಯ ಈಡಿಗ ನಿಗಮ ಸ್ಥಾಪಿಸುವಂತೆ ಕೇಳಿದ್ದೆವು.
ಆದರೆ, ಸರ್ಕಾರ ಹತ್ತಾರು ಹಿಂದುಳಿದ ವರ್ಗಗಳ ಸಮುದಾಯ ಸೇರಿಸಿ ಬಜೆಟ್‌ನಲ್ಲಿ ಅನುದಾನ ಘೋಷಿಸಿದೆ. ಇದು ನಮಗೆ ತೃಪ್ತಿ ತಂದಿಲ್ಲ’ ಎಂದರು.

ಪ್ರಣವಾನಂದ ಸ್ವಾಮೀಜಿ ಮಾತನಾಡಿ, ‘ನೀರಾ ಇಳಿಸಿ ಮಾರಾಟ ಮಾಡಲು ಅನುಮತಿ ಕೊಡುವವರೆಗೆ ಹಾವೇರಿ ಜಿಲ್ಲೆಯ ಅರೆ ಮಲ್ಲಾಪುರದ ಶರಣಬಸವೇಶ್ವರ ಪೀಠಕ್ಕೆ ಮರಳುವುದಿಲ್ಲ‘ ಎಂದು ಹೇಳಿದರು.

ಚಿಗರಳ್ಳಿಯ‌ ಜಗದ್ಗುರು ಮರುಳ ಶಂಕರದೇವರ ಗುರುಪೀಠದ ಸಿದ್ದಬಸವ ಕಬೀರ ಸ್ವಾಮೀಜಿ, ಸೋಲೂರಿನ ಆರ್ಯಈಡಿಗ ಪೀಠಾಧ್ಯಕ್ಷ ವಿಖ್ಯಾತಾನಂದ ಸ್ವಾಮೀಜಿ, ಶಂಕ್ರಯ್ಯ, ಶರಣಯ್ಯ ತಾತಾ ಸಾನಿಧ್ಯ ವಹಿಸಿದ್ದರು. ಜಗದೇವ ಗುತ್ತೇದಾರ, ಬಸಯ್ಯ ಗುತ್ತೇದಾರ, ಸುಭಾಷ ರಾಠೋಡ, ಗೌತಮ‌ ಬೊಮ್ಮನಳ್ಳಿ ಮಾತನಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು