ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಪಾಲಿಕೆಯಿಂದ ಪೌರ ಕಾರ್ಮಿಕರಿಗೆ ಬೂಟು, ಸಾಕ್ಸ್ ವಿತರಣೆ

Last Updated 8 ಜೂನ್ 2021, 7:50 IST
ಅಕ್ಷರ ಗಾತ್ರ

ಕಲಬುರ್ಗಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಸಾಕ್ಸ್ ಮತ್ತು ಬೂಟುಗಳನ್ನು ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಅವರು ವಿತರಿಸಿದರು.

ಮಂಗಳವಾರ ಇಲ್ಲಿನ ಟೌನ್ ಹಾಲ್ ಬಳಿ ಸಂಕೇತಿಕವಾಗಿ 50 ಜನ ಪೌರ ಕಾರ್ಮಿಕರಿಗೆ ಬೂಟುಗಳನ್ನು ವಿತರಿಸಿ ಮಾತನಾಡಿದ ಅವರು, ಪಾಲಿಕೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 1000 ಪೌರ ಕಾರ್ಮಿಕರ ದೈಹಿಕ ಹಿತರಕ್ಷಣೆಗಾಗಿ ಬೂಟ್ ಹಾಗೂ ಸಾಕ್ಸ್ ಗಳನ್ನು ನೀಡಲಾಗುತ್ತಿದೆ. ಹಿಂದೆ ಮಾಸ್ಕ್ಕ ಮತ್ತು ಹ್ಯಾಂಡ್ ಗ್ಲೋವ್ಸ್ ನೀಡಲಾಗಿತ್ತು ಎಂದರು.

ಕೇಂದ್ರ ಸರ್ಕಾರದ ನಿರ್ದೇಶನದಂತೆ ಪುರುಷ ಮತ್ತು‌ ಮಹಿಳಾ ಪೌರಕಾರ್ಮಿಕರಿಗೆ ಪ್ರತ್ಯೇಕ ಸಮವಸ್ತ್ರ ಖರೀದಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ, ಶೀಘ್ರದಲ್ಲಿ ಹಂತ ಹಂತವಾಗಿ ಸಮವಸ್ತ್ರ, ರೇನ್‌ಕೋಟ್ ಸಹ ಪೌರ ಕಾರ್ಮಿಕರಿಗೆ ನೀಡಲಾಗುತ್ತದೆ ಎಂದರು.

ಪೌರಕಾರ್ಮಿಕರ ಸುರಕ್ಷತೆಗಾಗಿ ಪ್ರತಿ 6 ತಿಂಗಳಿಗೊಮ್ಮೆ ಬಟ್ಟೆ, ಗ್ಲೌಸ್, ಮಾಸ್ಕ್, ಬೂಟ್ ಹೀಗೆ ಎಲ್ಲಾ ರೀತಿಯ ಸುರಕ್ಷಾ ಪರಿಕರಗಳನ್ನು ನಿಯಮಿತವಾಗಿ ನೀಡಲಾಗುತ್ತಿದೆ. ಕೊಳಚೆ ಪ್ರದೇಶದಲ್ಲಿ ಕಾರ್ಯನಿರ್ವಹಿಸುವವರಿಗೆ ಪಿ.ಪಿ.ಇ ಕಿಟ್‍ಗಳನ್ನು ಸಹ ಕೊಡಲಾಗುವುದೆಂದು. ಪೌರಕಾರ್ಮಿಕರು ಸುರಕ್ಷಾ ಪರಿಕರಗಳನ್ನು ಹಾಕಿಕೊಂಡೆ ಪ್ರತಿನಿತ್ಯ ಕರ್ತವ್ಯ ನಿರ್ವಹಿಸಬೇಕು. ನೀವು ಆರೋಗ್ಯವಾಗಿದ್ದರೆ, ನಗರ ಆರೋಗ್ಯವಾಗಿರುತ್ತದೆ ಎಂದು ಕಾರ್ಮಿಕರಿಗೆ ಅವರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪಾಲಿಕೆಯ ಪರಿಸರ ಎಂಜಿನಿಯರ್ ಸುಷ್ಮಾ ಸಾಗರ, ಮೆಲಕೇರಿ ಬಾಬು ಸೇರಿದಂತೆ‌ ಪಾಲಿಕೆ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT